Home News Udupi: ರೂಲ್ಸ್ ಬ್ರೇಕ್! ಡಿಜೆ ಸೌಂಡ್ ಮಾಲಕನ ಮೇಲೆ ಬಿತ್ತು ಕೇಸ್!

Udupi: ರೂಲ್ಸ್ ಬ್ರೇಕ್! ಡಿಜೆ ಸೌಂಡ್ ಮಾಲಕನ ಮೇಲೆ ಬಿತ್ತು ಕೇಸ್!

Hindu neighbor gifts plot of land

Hindu neighbour gifts land to Muslim journalist

Udupi: ಸಮಯದ ನಿಯಮವನ್ನು ಉಲ್ಲಂಘಿಸಿ ರಾತ್ರಿ ಹತ್ತು ಗಂಟೆಯ ಬಳಿಕವೂ ಧ್ವನಿ ವರ್ಧಕ ಬಳಸಿದ ಆರೋಪದಡಿ ಡಿ.ಜೆ ಸೌಂಡ್ ಮಾಲಕನ ವಿರುದ್ಧ ಕೇಸು ದಾಖಲಾಗಿದೆ.

ಮೂಡನಿಡಂಬೂರು ಗ್ರಾಮದ ನಿತಿನ್ ರಾಜ್ ಎಂಬವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ರಾತ್ರಿ ಹನ್ನೊಂದು ಗಂಟೆಯಾದರೂ ಇಲ್ಲಿ ಡಿ.ಜೆ ಕರ್ಕಶ ಸೌಂಡ್ ಕೇಳಿಬರುತ್ತಿದ್ದು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗಿತ್ತು. ಈ ಆರೋಪದ ಮೇರೆಗೆ ಮೇಲಾಧಿಕಾರಿಗಳ ಆದೇಶದಂತೆ ಉಡುಪಿ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಶಂಕರ್ ಎಂಬವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಮಯದಲ್ಲಿ ಧ್ವನಿವರ್ಧಕ ಬಳಸಲು ಅವಕಾಶವಿಲ್ಲ ಎಂದು ಸೂಚನೆ ಕೊಟ್ಟ ಮೇಲೂ ರಾಕೇಶ್ ಕುಮಾರ್ ಉದ್ಯಾವರ ಎಂಬಾತ ಕ್ಯಾರೇ ಎನ್ನದೆ ಡಿಜೆ ಮುಂದುವರೆಸಿದ್ದ. ಈ ಹಿನ್ನೆಲೆ ಅವರ ಮೇಲೆ ಉಡುಪಿ (udupi) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.