Home News Ayodhya: ಅಯೋಧ್ಯೆ ರಾಮಮಂದಿರಕ್ಕೆ ಬರೋಬ್ಬರಿ 2,100 ಕೋಟಿ ರೂ. ದಾನ, ಈ ಮಹಾ ದಾನಿ ಯಾರು...

Ayodhya: ಅಯೋಧ್ಯೆ ರಾಮಮಂದಿರಕ್ಕೆ ಬರೋಬ್ಬರಿ 2,100 ಕೋಟಿ ರೂ. ದಾನ, ಈ ಮಹಾ ದಾನಿ ಯಾರು ಗೊತ್ತೇ ?

Ayodhya Rama Mandir

Hindu neighbor gifts plot of land

Hindu neighbour gifts land to Muslim journalist

Ayodhya: ಲಕ್ನೋ: ಅಯೋಧ್ಯೆಯ (Ayodhya) ರಾಮಮಂದಿರ (Ram Mandir) ಟ್ರಸ್ಟ್‌ಗೆ ದೊಡ್ಡ ದಾನಿಯೊಬ್ಬರು ಬರೋಬ್ಬರಿ 2,100 ಕೋಟಿ ರೂಪಾಯಿ ಮೊತ್ತದ ಚೆಕ್ ಕಳಿಸಿದ್ದಾರೆ. ಈ ಮಹಾದಾನಿ ಯಾರು ಎಂದು ತಿಳಿದುಕೊಳ್ಳಲು ಕುತೂಹಲ ಇದೆಯಾ, ಹಾಗಿದ್ದರೆ ಈ ಪೋಸ್ಟ್ ಓದಿ. ಆಯಾ ಮಹಾ ಚೆಕ್ ಮೇಲೆ ದಾನಿ ಹೆಸರು, ವಿಳಾಸ, ಫೋನ್ ನಂಬರ್ ಬರೆಯಲಾಗಿದೆ. ಆದರೆ ಈಗಾಗಲೇ ರಾಮಮಂದಿರ ಖಾತೆಯಲ್ಲಿ ಸಂಪತ್ತು ತುಂಬಿ ತುಳುಕುತ್ತಿದೆ. ರಾಮ ಮಂದಿರ ದೇವಸ್ಥಾನದ ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿ ಎಫ್‌ಡಿ ರೂಪದಲ್ಲಿ 2,600 ಕೋಟಿ ರೂ. ಇದೆಯಂತೆ.

ಈ ಮಹಾದಾನಿ ಬೇರೆ ಯಾರೂ ಅಲ್ಲ. ಈ ಚೆಕ್ ಅನ್ನು ಪ್ರಧಾನ ಮಂತ್ರಿ ಸಹಾಯ ನಿಧಿ ಹೆಸರಲ್ಲಿ ಟ್ರಸ್ಟ್‌ಗೆ ಯಾರೋ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಚೆಕ್ ಬಗ್ಗೆ ಸಂಪೂರ್ಣ ವಿವರ ತಿಳಿಯಲು ಪ್ರಧಾನಿ ಸಚಿವಾಲಯವನ್ನು ಸಂಪರ್ಕಿಸಲು ಟ್ರಸ್ಟ್ ಈಗ ಮುಂದಾಗಿದೆ ಅನ್ನುವ ಮಾಹಿತಿಯಿದೆ. ಅಂದ ಹಾಗೇ, ರಾಮಮಂದಿರ ಟ್ರಸ್ಟ್ 2,600 ಕೋಟಿ ಹಣವನ್ನು ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿದೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ರಾಯ್ ಅವರು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯ ಹೆಸರಿನಲ್ಲಿ ಬರೆದ ಚೆಕ್ ಅನ್ನು ಅಂಚೆ ಮೂಲಕ ಟ್ರಸ್ಟ್‌ಗೆ ಕಳುಹಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಚೆಕ್ ತಮ್ಮ ಕಚೇರಿಗೆ ತಲುಪಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಪ್ರಧಾನಿ ಕಚೇರಿಗೆ ಕಳುಹಿಸುವಂತೆ ಟ್ರಸ್ಟ್‌ನ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಗುರುವಾರ 2023-24ನೇ ಹಣಕಾಸು ವರ್ಷದ ಆದಾಯ ಮತ್ತು ವೆಚ್ಚದ ವಿವರಗಳನ್ನು ಬಹಿರಂಗಪಡಿಸಿದ್ದು, ಕಳೆದ ವರ್ಷ ದೇವಸ್ಥಾನ ನಿರ್ಮಾಣಕ್ಕೆ 776 ಕೋಟಿ ರೂ ಖರ್ಚಾಗಿದೆ. ಈತನಕ ದೇವಸ್ಥಾನಕ್ಕೆ ಒಟ್ಟು 540 ಕೋಟಿ ರೂಪಾಯಿ ಹಾಗೂ ಇತರೆ ವೆಚ್ಚಕ್ಕೆ 136 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದೆ. ಸಭೆಯ ಅಧ್ಯಕ್ಷತೆಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ವಹಿಸಿದ್ದರು. ಉತ್ತರ ಪ್ರದೇಶದಲ್ಲಿ ನಿರ್ಮಾಣವಾದ ರಾಮ ಮಂದಿರ ದೇವಾಲಯದ ನಿರ್ಮಾಣ ಕಾರ್ಯಕ್ಕೆ ಇವರ ಈವರೆಗೆ 1,850 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ. ಈ ಆರ್ಥಿಕ ವರ್ಷದಲ್ಲಿ 850 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಲಾಗಿದೆ.

ರಾಮಮಂದಿರ ಪರವಾಗಿ ಕಳೆದ ಆರ್ಥಿಕ ವರ್ಷದಲ್ಲಿ 363.34 ಕೋಟಿ ರೂ. ಬ್ಯಾಂಕ್ ಬಡ್ಡಿ ರೂಪದಲ್ಲಿ ಬಂದಿದ್ದು, 58 ಕೋಟಿ ರೂ. ಹುಂಡಿ ಮೂಲಕ 24.50 ಕೋಟಿ ರೂ., ಆನ್‌ಲೈನ್ ಮೂಲಕ 71 ಕೋಟಿ ರೂ. ಅನಿವಾಸಿ ಭಾರತೀಯರಿಂದ 10.43 ಕೋಟಿ ದೇಣಿಗೆ ಬಂದಿದೆ. ರಾಮ ಮಂದಿರ ದೇವಸ್ಥಾನದ ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿ ಎಫ್‌ಡಿ ರೂಪದಲ್ಲಿ 2,600 ಕೋಟಿ ರೂ. ಇದೆ ಎಂದು ಚಂಪತ್ರಾಯ್ ಬಹಿರಂಗಪಡಿಸಿದ್ದಾರೆ. 900 ಕೆಜಿ ಬೆಳ್ಳಿ ಹಾಗೂ 20 ಕೆಜಿ ಚಿನ್ನವನ್ನು ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್‌ಗೆ ಕಳುಹಿಸಲಾಗಿದೆ ಅನ್ನೋ ಮಾಹಿತಿ ನೀಡಲಾಗಿದೆ.