Home News ಭೀಕರ ರಸ್ತೆ ಅಪಘಾತಕ್ಕೆ ಐವರು ಸ್ಥಳದಲ್ಲೇ ಸಾವು-ಮಗು ಸಹಿತ ಮಹಿಳೆಯರು ಗಂಭೀರ

ಭೀಕರ ರಸ್ತೆ ಅಪಘಾತಕ್ಕೆ ಐವರು ಸ್ಥಳದಲ್ಲೇ ಸಾವು-ಮಗು ಸಹಿತ ಮಹಿಳೆಯರು ಗಂಭೀರ

Hindu neighbor gifts plot of land

Hindu neighbour gifts land to Muslim journalist

ದತ್ತಾತ್ರೇಯನ ದರ್ಶನ ಪಡೆದು ಮರಳುತ್ತಿದ್ದ ಕುಟುಂಬವೊಂದು ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿ ಮಗು ಸಹಿತ ಇಬ್ಬರು ಯುವತಿಯರು ಗಂಭೀರ ಗಾಯಗೊಂಡ ಘಟನೆ ಕಲಬುರ್ಗಿಯ ಅಫಜಲಪುರ ದಲ್ಲಿ ನಡೆದಿದೆ.

ಮೃತರು ದೇವಲಗಾಣಗಾಪುರದ ದತ್ತಾತ್ರೇಯ ದರ್ಶನ ಮಾಡಿಕೊಂಡು ಮಹಾರಾಷ್ಟ್ರದ ಕಡೆಗೆ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ಚಾಲಕ ಸಹಿತ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಉಳಿದ ಮೂವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.