Home News ಖಾಸಗಿ ವಲಯದ ನೌಕರರಿಗೆ ಗುಡ್ ನ್ಯೂಸ್, ನಿವೃತ್ತಿ ವಯಸ್ಸು ಏರಿಕೆ!!

ಖಾಸಗಿ ವಲಯದ ನೌಕರರಿಗೆ ಗುಡ್ ನ್ಯೂಸ್, ನಿವೃತ್ತಿ ವಯಸ್ಸು ಏರಿಕೆ!!

Hindu neighbor gifts plot of land

Hindu neighbour gifts land to Muslim journalist

ಧಾರವಾಡ: ಖಾಸಗಿ ವಲಯದ ನೌಕರರಿಗೆ ಹೈಕೋರ್ಟ್ ಸಿಹಿಸುದ್ದಿ ನೀಡಿದ್ದು, ನಿವೃತ್ತಿಯ ವಯಸ್ಸನ್ನು 58 ವರ್ಷದಿಂದ 60 ವರ್ಷಕ್ಕೆ ಏರಿಸಬೇಕು ಎಂಬ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ದೊರಕಿದೆ.

ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ ತಿದ್ದುಪಡಿ ನಿಯಮಗಳ ಮಾದರಿ ಅನ್ವಯ ನೌಕರರ ನಿವೃತ್ತಿ ವಯಸ್ಸು ಏರಿಸಿ, ಸರ್ಕಾರ ಆದೇಶಿಸಿತ್ತು. ರಾಜ್ಯ ಸರ್ಕಾರದ ಈ ಆದೇಶವನ್ನು ಹರಿಹರದ ಗ್ರಾಸಿಂ ಇಂಡಸ್ಟ್ರೀಸ್ ಕಂಪನಿಯು ಪ್ರಶ್ನಿಸಿ, ಹೈಕೋರ್ಟ್ ಮೊರೆ ಹೋಗಿತ್ತು.

ಕಂಪನಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠವು 2021, ಸೆಪ್ಟೆಂಬರ್ 17ರಂದು ವಜಾಗೊಳಿಸಿತ್ತು. ಈ ವಜಾ ಆದೇಶವನ್ನು ಪ್ರಶ್ನಿಸಿ ಮತ್ತೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧದ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ.

ಅಲ್ಲದೇ 2018ರ ಮಾರ್ಚ್ 17 ಅಥವಾ ನಂತ್ರದಲ್ಲಿ 59 ವರ್ಷಗಳನ್ನು ಪೂರೈಸಿ ನಿವೃತ್ತರಾದವರಿಗೆ ನಿವೃತ್ತಿ ದಿನಾಂಕ ಮತ್ತು ಅವರು 60 ವರ್ಷ ತಲುಪಿದ ದಿನಾಂಕದ ನಡುವಿನ ಅವಧಿಗೆ ಶೇ.50ರಷ್ಟು ವೇತನವನ್ನು ಮರುಪಾವತಿ ಮಾಡಬೇಕು ಎಂದು ಮೇಲ್ಮನವಿದಾರರಿಗೆ ಸೂಚಿಸಿದೆ.