Home News PM Narendra Modi: ಅಮೇರಿಕ ಭೇಟಿ ಬೆನ್ನಲ್ಲೇ ಮತ್ತಷ್ಟು ಉತ್ತುಂಗಕ್ಕೆ ಏರಿದ ಮೋದಿ ಮೇಲಿನ ಗೌರವ!

PM Narendra Modi: ಅಮೇರಿಕ ಭೇಟಿ ಬೆನ್ನಲ್ಲೇ ಮತ್ತಷ್ಟು ಉತ್ತುಂಗಕ್ಕೆ ಏರಿದ ಮೋದಿ ಮೇಲಿನ ಗೌರವ!

Hindu neighbor gifts plot of land

Hindu neighbour gifts land to Muslim journalist

PM Narendra Modi: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಮೆರಿಕ (America) ಭೇಟಿ ನೀಡಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಕಳ್ಳಸಾಗಣೆ ವಿರುದ್ಧ ಅಮೋಘ ಜಯ ಸಾಧಿಸಿದ್ದಾರೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಈಗಾಗಲೇ ಕಳ್ಳಸಾಗಣೆ ಮಾಡಲಾಗಿದ್ದ 297 ಪುರಾತನ ವಸ್ತುಗಳನ್ನು ಅಮೆರಿಕ ಸರ್ಕಾರ ಭಾರತಕ್ಕೆ (India) ಮತ್ತೆ ಹಸ್ತಾಂತರಿಸಿದೆ. ಇದರಿಂದ ಮೋದಿ ಮೇಲಿನ ಗೌರವ ಮತ್ತಷ್ಟು ಉತ್ತುಂಗಕ್ಕೆ ಏರಿದೆ.

ಈ ಮೊದಲು ಭಾರತದಲ್ಲಿ ಸಾಂಸ್ಕೃತಿಕ ಆಸ್ತಿಗಳ ಕಳ್ಳಸಾಗಣೆ ದೊಡ್ಡದಾದ ಜಾಲವಾಗಿದ್ದು, ಇದು ಇತಿಹಾಸದುದ್ದಕ್ಕೂ ಅನೇಕ ಸಂಸ್ಕೃತಿಗಳು ಮತ್ತು ದೇಶಗಳ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಭಾರತಕ್ಕೆ ಹೊಡೆತ ಬಿದ್ದಿದೆ.

ಇದೀಗ ಮೋದಿ ಅವರು ‘ಸಾಂಸ್ಕೃತಿಕ ಆಸ್ತಿಗಳ ಅಕ್ರಮ ಕಳ್ಳಸಾಗಣೆ ವಿರುದ್ಧದ ಹೋರಾಟವನ್ನು ಬಲಪಡಿಸುವುದಕ್ಕಾಗಿ 297 ಅಮೂಲ್ಯ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದಕ್ಕಾಗಿ ನಾನು ಅಧ್ಯಕ್ಷ ಜೋ ಬೈಡನ್ (Joe Biden) ಮತ್ತು ಯುಎಸ್ (US) ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ’ ಎಂದು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಮೋದಿ ಅಧಿಕಾರಕ್ಕೆ ಬಂದ ನಂತರದಲ್ಲಿ ಅಂದರೆ 2014 ರಿಂದ ಭಾರತವು ಮರಳಿ ಪಡೆದ ಒಟ್ಟು ಪ್ರಾಚೀನ ವಸ್ತುಗಳ ಸಂಖ್ಯೆ 640 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ಯುಎಸ್‌ನಿಂದ 578 ಪುರಾತನ ವಸ್ತುಗಳು ಭಾರತಕ್ಕೆ ಮರಳಿವೆ.

ಸದ್ಯ ಭಾರತಕ್ಕೆ ಹಸ್ತಾಂತರಿಸಲಾದ ಕೆಲವು ಗಮನಾರ್ಹ ಪ್ರಾಚೀನ ವಸ್ತುಗಳಲ್ಲಿ ಕ್ರಿ.ಶ 10-11 ನೇ ಶತಮಾನಕ್ಕೆ ಸೇರಿದ ಮಧ್ಯ ಭಾರತದ ಮರಳುಗಲ್ಲಿನ ‘ಅಪ್ಸರೆ’, ಕ್ರಿ.ಶ 15-16 ನೇ ಶತಮಾನಕ್ಕೆ ಸೇರಿದ ಕಂಚಿನ ಜೈನ ತೀರ್ಥಂಕರ, ಕ್ರಿ.ಶ 3-4 ನೇ ಶತಮಾನಕ್ಕೆ ಸೇರಿದ ಪೂರ್ವ ಭಾರತದ ಟೆರಾಕೋಟಾ ಹೂದಾನಿ ಮತ್ತು ಕ್ರಿ.ಪೂ 1 ರಿಂದ 1 ನೇ ಶತಮಾನಕ್ಕೆ ಸೇರಿದ ದಕ್ಷಿಣ ಭಾರತದ ಕಲ್ಲಿನ ಶಿಲ್ಪ ಸೇರಿವೆ. https://x.com/RT_India_news/status/1837896049362718727

ಇನ್ನು ಪುರಾತನ ವಸ್ತುಗಳಲ್ಲಿ 17-18 ನೇ ಶತಮಾನಕ್ಕೆ ಸೇರಿದ ದಕ್ಷಿಣ ಭಾರತದ ಕಂಚಿನ ಗಣೇಶ, ಕ್ರಿ.ಶ 17-18 ನೇ ಶತಮಾನಕ್ಕೆ ಸೇರಿದ ಪೂರ್ವ ಭಾರತದ ಕಂಚಿನ ವಿಷ್ಣು ಇತರ ಪ್ರಮುಖ ವಸ್ತುಗಳಲ್ಲಿ ಸೇರಿವೆ. ಕ್ರಿ.ಶ 15-16 ನೇ ಶತಮಾನದ ಉತ್ತರ ಭಾರತದ ಮರಳುಗಲ್ಲಿನ ಕೆತ್ತಲಾದ ನಿಂತಿರುವ ಬುದ್ಧ ಕೂಡಾ ಸೇರಿದೆ.