Home News Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣ – ಸೆ.09 ಕ್ಕೆ ವಿಚಾರಣೆ ಮುಂದೂಡಿಕೆ

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣ – ಸೆ.09 ಕ್ಕೆ ವಿಚಾರಣೆ ಮುಂದೂಡಿಕೆ

Hindu neighbor gifts plot of land

Hindu neighbour gifts land to Muslim journalist

Darshan Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಆರೋಪಿಗಳಾದ ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ ಇದಕ್ಕೆ ಸಹಕರಿಸಿದ ಮತ್ತಿತರರು ಇಂದು 57ನೇ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ 57ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ವರ್ಗಾವಣೆ ಹಿನ್ನಲೆ 64ನೇ ಸೆಷನ್ಸ್ ಕೋರ್ಟ್ ಗೆ ದರ್ಶನ್ ಅಂಡ್ ಗ್ಯಾಂಗ್ ಹಾಜರಾದರು. ನ್ಯಾಯಾಧೀಶರಾದ ಐ.ಪಿ.ನಾಯ್ಕ್ ಅವರು ವಿಚಾರಣೆ ನಡೆಸಿ ವಿಚಾರಣೆಯನ್ನು ಸೆ.09 ಕ್ಕೆ ಮುಂದೂಡಿ ಆದೇಶ ನೀಡಿದರು.

ವಿಚಾರಣೆ ಆರಂಭಿಸಿದ ನ್ಯಾಯಾಧೀಶರು, ಎಲ್ಲಾ ಆರೋಪಿಗಳ ಹೆಸರು ಕರೆದು ಹಾಜರಾತಿ ಖಚಿತ ಪಡಿಸಿಕೊಂಡ ಕೋರ್ಟ್ ಸಿಬ್ಬಂದಿ. ಕಾರ್ತೀಕ್‌, ಕೇಶವ್ ಹಾಗೂ ನಿಖಿಲ್ ಮೂವರು ಆರೋಪಿಗಳು ಕೋರ್ಟ್ ಗೆ ಗೈರಾಗಿದ್ದು, ಉಳಿದ 14ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದರು.

ಆ. 6 ರಂದು ಆರೋಪಿ ದರ್ಶನ್ ಹಾಗೂ ಪವಿತ್ರ ಗೌಡ ಪರವಾಗಿ ವಕೀಲರು ಲಿಖಿತ ರೂಪದಲ್ಲಿ ಪ್ರಬಲವಾದ ಮಂಡನೆ ಮಾಡಿದ್ದರು. ನಟ ದರ್ಶನ್ ಜಾಮೀನು ರದ್ದುಗೊಳಿಸಬಾರದು ಎಂದು ಮನವಿ ಮಾಡಿರುವ ವಕೀಲರು, ಅದಕ್ಕೆ ಪೂರಕವಾಗಿ ಸಾಕಷ್ಟು ಕಾರಣಗಳನ್ನು ನೀಡಿದ್ದಾರೆ. ಹಾಗೆ ರೇಣುಕಾಸ್ವಾಮಿ ಅಪಹರಣದ ಆರೋಪದಲ್ಲಿ ದರ್ಶನ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಲಿಖಿತ ರೂಪದಲ್ಲಿ ವಾದಿಸಿದ್ದರು.

ಮತ್ತೊಂದೆಡೆ ಸುಪ್ರೀಂ ಕೋರ್ಟ್ ನಲ್ಲಿಯೂ ದರ್ಶನ್ ಜಾಮೀನು ರದ್ದುಪಡಿಸುವಂತೆ ರಾಜ್ಯ ಪೊಲೀಸ್ ರು ಸಲ್ಲಿಸಿರುವ ಅರ್ಜಿ ಪ್ರಕರಣವನ್ನು 6 ತಿಂಗಳ ಒಳಗೆ ಇತ್ಯರ್ಥಗೊಳಿಸುವಂತೆ ಗಡವು ನೀಡಲಾಗಿದೆ.

Bandipur: ಬಂಡೀಪುರ: ಆನೆ ಜೊತೆ ಸೆಲ್ಸಿ ತೆಗೆಯಲು ದುಸ್ಸಾಹಸ: ಗಾಯಗೊಂಡಿದ್ದ ಆರೋಪಿಗೆ ₹25,000 ದಂಡ!