Home News Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣ; ಎ4 ಆರೋಪಿ ರಘು ತಾಯಿ ನಿಧನ

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣ; ಎ4 ಆರೋಪಿ ರಘು ತಾಯಿ ನಿಧನ

Renukaswamy Murder Case

Hindu neighbor gifts plot of land

Hindu neighbour gifts land to Muslim journalist

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಸಹಚರರು ಈಗಾಗಲೇ ಬಂಧಿಯಾಗಿದ್ದು, ಎ4 ಆರೋಪಿಯಾಗಿರುವ ರಘು ತಾಯಿ ಮಂಜುಳಮ್ಮ (70) ಇಂದು ನಿಧನರಾಗಿದ್ದಾರೆ.

Viral Video: ಉಡುಪಿ: ಇವನೆಂಥಾ ಕ್ರೂರಿ! ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ಎಳೆದೊಯ್ದ ಪಾಪಿ

ಚಿತ್ರದುರ್ಗ ಜಿಲ್ಲೆಯ ಕೋಳಿ ಬುರುಜನಹಟ್ಟಿ ಗ್ರಾಮದವರಾದ ಮಂಜುಳಮ್ಮ ಅವರು ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದೆ. ಇದರ ಜೊತೆಗೆ ಮಗ ಕೂಡಾ ಕೊಲೆ ಪ್ರಕರಣದಲ್ಲಿ ಜೈಲುಪಾಲಾದ ಬಳಿಕ ಇವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಮಗ ಈಗ ಬರುತ್ತಾನೆ ಆಗ ಬರುತ್ತಾನೆ ಎಂದು ಕಾದಿದ್ದ ತಾಯಿ ಜೀವ ಇದೀಗ ಮಗ ನ್ಯಾಯಾಂಗ ಬಂಧನದಲ್ಲಿರುವಾಗಲೇ ಕೊನೆಯುಸಿರೆಳಿದ್ದಾರೆ.

ರಘು ಚಿತ್ರದುರ್ಗದ ದರ್ಶನ್‌ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷನಾಗಿದ್ದ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ ಕಳಿಸಿದ್ದಕ್ಕೆ ರೇಣುಕಾಸ್ವಾಮಿ ಕಿಡ್ನ್ಯಾಪ್‌ ಕೇಸಲ್ಲಿ ಸಿಲುಕಿ ಇದೀಗ ಪರಪ್ಪನ ಅಗ್ರಹಾರದಲ್ಲಿದ್ದಾನೆ. ಒಂದು ಕಡೆ ಹೆಂಡತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೆ, ಇದೀಗ ತಾಯಿ ಕೂಡಾ ಮೃತ ಹೊಂದಿದ್ದಾರೆ.

ರಘು ಕೊನೆಯ ಬಾರಿಗಾದರೂ ತಾಯಿಯ ಮುಖ ನೋಡಲಿ ಎಂದು, ಅಂತ್ಯ ಸಂಸ್ಕಾರಕ್ಕಾದರೂ ರಘುನನ್ನು ಕರೆಸಿ ಎಂದು ಪೊಲೀಸ್‌ ಇಲಾಖೆಗೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

Naresh crying video: ನರೇಶ್ ಗೆ ಮತ್ತೇ ಸಂಕಷ್ಟ! ʼಅವಳು ನನ್ನ ಬಿಟ್ಟು ಹೋದ್ಳುʼ ಅಂತ ಗೋಳಾಡಿದ ನರೇಶ್..! ಅಷ್ಟಕ್ಕೂ ಪವಿತ್ರಾಗೆ ಏನಾಯ್ತು?