Home News Prakash Shah: 75 ಕೋಟಿ ರೂ ಸಂಬಳದ ತ್ಯಜಿಸಿ ಜೈನ ಸನ್ಯಾಸಿ ದೀಕ್ಷೆ ಪಡೆದ ರಿಲಯನ್ಸ್...

Prakash Shah: 75 ಕೋಟಿ ರೂ ಸಂಬಳದ ತ್ಯಜಿಸಿ ಜೈನ ಸನ್ಯಾಸಿ ದೀಕ್ಷೆ ಪಡೆದ ರಿಲಯನ್ಸ್ ಉಪಾಧ್ಯಕ್ಷ!!

Hindu neighbor gifts plot of land

Hindu neighbour gifts land to Muslim journalist

Prakash Shah: ವೈರಾಗ್ಯವೆಂಬುದು ಯಾರಿಗೆ, ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎರಡು ಮೂರು ತಲೆಮಾರಿನವರೆಗೂ ಕೂತು ತಿನ್ನುವಷ್ಟು ಆಸ್ತಿ ಸಂಪತ್ತು ಹೊಂದಿದ ಅನೇಕರು ಇತ್ತೀಚಿನ ದಿನಗಳಲ್ಲಿ ಸಂಸಾರಿಕ ಹಾಗೂ ಐಷಾರಾಮಿ ಜೀವನವನ್ನು ತೊರೆದು ಸನ್ಯಾಸದ ಮರೆ ಹೋಗುತ್ತಿದ್ದಾರೆ. ಇದೀಗ ಅಂತದ್ದೇ ಘಟನೆ ಯೊಂದು ಮತ್ತೆ ಬೆಳಕಿಗೆ ಬಂದಿದ್ದು ಬರೋಬ್ಬರಿ 75 ಕೋಟಿ ರೂಪಾಯಿ ಸಂಬಳದ ಹುದ್ದೆಯನ್ನು ತ್ಯಜಿಸಿ ರಿಲಯನ್ಸ್ ಉಪಾಧ್ಯಕ್ಷ ಜೈನ ಸನ್ಯಾಸ ದೀಕ್ಷೆಯನ್ನು ಪಡೆದಿದ್ದಾರೆ.

ಹೌದು, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಆಪ್ತ ಸಹಾಯಕರಾಗಿದ್ದ ಪ್ರಕಾಶ್ ಶಾ, ತಮ್ಮ ಉನ್ನತ ಹುದ್ದೆ ಮತ್ತು 75 ಕೋಟಿ ರೂಪಾಯಿ ಸಂಬಳ ತ್ಯಜಿಸಿ ಸನ್ಯಾಸಿಯಾಗಿದ್ದಾರೆ. ವ್ಯವಹಾರ ಕೌಶಲ್ಯ ಮತ್ತು ನಾಯಕತ್ವಕ್ಕೆ ಹೆಸರುವಾಸಿಯಾದ ಶಾ ಮತ್ತು ಅವರ ಪತ್ನಿ ನೈನ್ ಶಾ ಮಹಾವೀರ ಜಯಂತಿಯಂದು ದೀಕ್ಷೆ ತೆಗೆದುಕೊಳ್ಳುವ ಮೂಲಕ ಶಾಂತಿ ಮತ್ತು ಆಧ್ಯಾತ್ಮಿಕ ಜೀವನವನ್ನು ಸ್ವೀಕರಿಸಿದ್ದಾರೆ. ಈ ಕುರಿತಾಗಿ ಕೆಲವು ಫೋಟೋಗಳು ವೈರಲ್ ಆಗಿವೆ.

ಇನ್ನು ವೈರಲ್ ಆಗುತ್ತಿರುವ ಅವರ ಫೋಟೋಗಳು, ಪ್ರಕಾಶ್ ಶಾ ಅವರು ಸರಳವಾದ ಬಿಳಿ ನಿಲುವಂಗಿಯನ್ನು ಧರಿಸಿ, ಕೆಲವೇ ವಸ್ತುಗಳೊಂದಿಗೆ ಬರಿಗಾಲಿನಲ್ಲಿ ನಡೆಯುವುದನ್ನು ಕಾಣಬಹುದು.

ಇದನ್ನೂ ಓದಿ: America: ಬಾಂಬ್ ದಾಳಿ ಕೆಲವೇ ನಿಮಿಷಗಳ ಮೊದಲು ಇರಾನ್ ಮೇಲೆ ದಾಳಿ ಮಾಡಲು ನಿರ್ಧರಿಸಿದ್ದ ಟ್ರಂಪ್‌ – ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್