Home News SIT: ಪ್ರಣವ್ ಮಹಾಂತಿ ಕೇಂದ್ರ ಸೇವೆಗೆ ಕಳಿಸುವ ವಿಚಾರ – ಯಾವುದೇ ತೀರ್ಮಾನವನ್ನು ನಾವು ತೆಗೆದುಕೊಂಡಿಲ್ಲ-...

SIT: ಪ್ರಣವ್ ಮಹಾಂತಿ ಕೇಂದ್ರ ಸೇವೆಗೆ ಕಳಿಸುವ ವಿಚಾರ – ಯಾವುದೇ ತೀರ್ಮಾನವನ್ನು ನಾವು ತೆಗೆದುಕೊಂಡಿಲ್ಲ- ತಪ್ಪು ಸಂದೇಶ ಕೊಡಬೇಡಿ – ಗೃಹಸಚಿವ ಪರಮೇಶ್ವರ್

Hindu neighbor gifts plot of land

Hindu neighbour gifts land to Muslim journalist

SIT: ಪ್ರಣವ್ ಮಹಾಂತಿ ಕೇಂದ್ರ ಸೇವೆಗೆ ಕಳಿಸುವ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್ ಅವರು, ಇದರಲ್ಲಿ ಬಹಳ ತಪ್ಪು ಕಲ್ಪನೆಗಳಿವೆ. ಧರ್ಮಸ್ಥಳ ಪ್ರಕರಣದಲ್ಲಿ ಡಿಜಿ ಲೆವೆಲ್ ಅಧಿಕಾರಿಗಳನ್ನು ತನಿಖೆಗೆ ನಿಯೋಜಿಸಬೇಕು ಅಂತ ಹೇಳಿದ್ವಿ. ಹೀಗಾಗಿ ಮೊಹಂತಿಯವರನ್ನು ನೇಮಕ ಮಾಡಿದ್ವಿ. ಕೇಂದ್ರದ ಸೇವೆಗೆ ಕರೆಸಿಕೊಳ್ಳುವ ಪಟ್ಟಿಯಲ್ಲಿ ಅವರ ಹೆಸರಿದೆ. ನಾವು ಇನ್ನೂ ಕೂಡ ಅದರ ಬಗ್ಗೆ ಏನು ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದರು.

ಅವರನ್ನು ಡೆಪ್ಯುಟೇಷನ್ ಮೇಲೆ ಕಳಿಸಬೇಕಾ ಬೇಡ್ವಾ ಅನ್ನೋದು ತೀರ್ಮಾನ ಆಗಿಲ್ಲ. ಅದು ಡಿಪಿಆರ್ ಅಂದ್ರೆ ಮುಖ್ಯಮಂತ್ರಿಗಳೇ ಬರುತ್ತೆ. ಆದರೆ ಇನ್ನೂ ಯಾವುದೇ ತೀರ್ಮಾನವನ್ನು ನಾವು ತೆಗೆದುಕೊಂಡಿಲ್ಲ. ಈ ನಡುವೆ ಇಲ್ಲ ಸಲ್ಲದ ಪೋಸ್ಟ್‌ ಗಳನ್ನು ಹಾಕೋದು ಮಾಡುತ್ತಿದ್ದಾರೆ. ಅದೆಲ್ಲಾ ಸರಿ ಕಾಣುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಧರ್ಮಸ್ಥಳ ಪ್ರಕರಣ ದಿಕ್ಕು ತಪ್ಪಿಸಲು ಪ್ರಣವ್ ಮೊಹಂತಿ ಕೇಂದ್ರಕ್ಕೆ ಕಳಿಸುತ್ತಿದ್ದಾರೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು ಸರ್ಕಾರದ ಆಸಕ್ತಿ ಇದರಲ್ಲಿ ಏನಿದೆ..? ಇಲ್ಲ ಅಂದ್ರೆ ನಾವು ಎಸ್ಐಟಿ ಯಾಕೆ ಮಾಡ್ತಿದ್ವಿ..? ಸರ್ಕಾರಕ್ಕೆ ಸತ್ಯಾಂಶ ಹೊರಗೆ ಬರಬೇಕು ಅನ್ನೋದು ಮಾತ್ರ ಇರೋದು. ಅದಕ್ಕಾಗಿ ಎಸ್ಐಟಿ ಮಾಡಿದ್ದೇವೆ. ಎಸ್ಐಟಿ ತನಿಖೆಯಿಂದ ಸತ್ಯಾಂಶ ಗೊತ್ತಾಗುತ್ತೆ ಅಷ್ಟೇ ನಮಗೂ ಬೇಕಾಗಿರೋದು ಹಾಗೆ ಸಾರ್ವಜನಿಕರಿಗೂ ಕೂಡ ಅದೇ ಬೇಕಿರೋದು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.

ಯಾರನ್ನು ರಕ್ಷಣೆ ಮಾಡಬೇಕು ಯಾರನ್ನು ಸಿಕ್ಕಿಹಾಕಿಸಬೇಕು, ಆ ರೀತಿಯಾದ ಯಾವುದೇ ಅಜೆಂಡಾ ಇಲ್ಲ, ಯಾರು ಕೂಡ ಅದನ್ನು ತಪ್ಪು ಭಾವನೆಯಿಂದ ನೋಡಬಾರದು. ನಾವು ಎಸ್ಐಟಿ ತಂಡಕ್ಕೆ ಪಾರದರ್ಶಕವಾಗಿ ತನಿಖೆಯನ್ನು ಮಾಡಬೇಕು ಅಂತ ಹೇಳಿದ್ದೇವೆ. ಸರ್ಕಾರಕ್ಕೆ ಇರುವ ಅಜೆಂಡಾ ಕೂಡ ಅಷ್ಟೇ ಎಂದು ಗೃಹ ಸಚಿವರು ಈ ವಿಷಯದ ಬಗ್ಗೆ ಇರುವ ಗೊಂದಲಕ್ಕೆ ಸ್ಪಷ್ಟೀಕರಣವನ್ನು ನೀಡಿದರು.