Home Breaking Entertainment News Kannada RCB Win: ಬೆಂಗಳೂರಿಗೆ ಆಗಮಿಸಿದ ಆರ್‌ಸಿಬಿ ತಂಡ: ಭರ್ಜರಿಯಾಗಿ ಸ್ವಾಗತಿಸಿದ ಡಿಸಿಎಂ ಡಿ.ಕೆ ಶಿವಕುಮಾರ್

RCB Win: ಬೆಂಗಳೂರಿಗೆ ಆಗಮಿಸಿದ ಆರ್‌ಸಿಬಿ ತಂಡ: ಭರ್ಜರಿಯಾಗಿ ಸ್ವಾಗತಿಸಿದ ಡಿಸಿಎಂ ಡಿ.ಕೆ ಶಿವಕುಮಾರ್

Hindu neighbor gifts plot of land

Hindu neighbour gifts land to Muslim journalist

RCB Win: 17 ವರ್ಷಗಳ ನಂತರ ಐಪಿಎಲ್‌ ಕಪ್‌ ತನ್ನದಾಗಿಸಿಕೊಂಡ ರಾಯಲ್ ಚಾಲೆಂಜರ್ಸ್ ತಂಡ ತನ್ನ ತವರೂರಿನಲ್ಲಿ ಸಂಭ್ರಮ ಆಚರಿಸಲು ಆಗಮಿಸಿದೆ. ಬೆಂಗಳೂರು IPL ಕಪ್ ಗೆದ್ದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಲು ಇನ್ನೇನು ಕೆಲವೇ ಕ್ಷಣಗಳು ಬಾಕಿ ಇವೆ. ಈಗಾಗಲೇ ಎಚ್‌ಎಎಲ್ ಏರ್‌ಪೋರ್ಟ್‌ಗೆ RCB ತಂಡ ಪದಾರ್ಪಣೆ ಮಾಡಿದ್ದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭರ್ಜರಿಯಾಗಿ ತಂಡವನ್ನು ಸ್ವಾಗತಿಸಿ ಕರೆ ತರುತ್ತಿದ್ದಾರೆ.

ಅಹಮದಾಬಾದ್‌ನಿಂದ ವಿಮಾನದಲ್ಲಿ ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರನ್ನು ಸ್ವಾಗತಿಸಿದ ಡಿಸಿಎಂ ಡಿಕೆಶಿ, ಹೂಗುಚ್ಚ ನೀಡಿ ತಂಡವನ್ನು ಬರಮಾಡಿಕೊಂಡರು. RCB ಆಟಗಾರರು ಹೆಚ್‌ಎಎಲ್‌ನಿಂದ ತಾಜ್ ವೆಸ್ಟಂಡ್‌ನತ್ತ ಪ್ರಯಾಣ ಬೆಳೆಸಿದ್ದು, ಸಂಜೆ ಚಿನ್ನಸ್ವಾಮಿ ಸ್ಟೇಡಿಯಂಗೆ ಬರಲಿದ್ದಾರೆ.

ಕಳೆಗಟ್ಟಿದ ಚಿನ್ನಸ್ವಾಮಿ ಕ್ರೀಡಾಂಗಣ

ನಮ್ಮ ಬೆಂಗಳೂರು ತಂಡದ ಹೋಮ್‌ಗೌಂಡ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಬ್ಬದ ಕಳೆ ಮನೆ ಮಾಡಿದೆ. ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂನತ್ತ ಬರುತ್ತಿದ್ದು ಕ್ರೀಡಾಂಗಣದ ಸುತ್ತ ಪೊಲೀಸ್ ಸರ್ಪಗಾವಲಿದೆ. ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಸಂಜೆ ರಘು ದೀಕ್ಷಿತ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.