

RBI: ಭಾರತೀಯ ರಿಸರ್ವ್ ಬ್ಯಾಂಕ್ (RBI) 50 ರೂಪಾಯಿ ನೋಟಿನ ಕುರಿತು ಬಿಗ್ ಅಪ್ಡೇಟ್ ನೀಡಿದೆ. ಅದೇನೆಂದರೆ ಆರ್‌ಬಿಐ ಮಾಡಿರುವ ಹೊಸ ಘೋಷಣೆಯಂತೆ, ಹೊಸದಾಗಿ ನೇಮಕಗೊಂಡ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿಯನ್ನು ಹೊಂದಿರುವ ಹೊಸ 50 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಿದೆ.
ಯಸ್, ಹೊಸದಾಗಿ ನೇಮಕಗೊಂಡ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿಯನ್ನು ಹೊಂದಿರುವ ಹೊಸ 50 ರೂಪಾಯಿ ನೋಟುಗಳನ್ನು RBI ಬಿಡುಗಡೆ ಮಾಡಲಿದೆ. ಇದರೊಂದಿಗೆ ಡಿಸೆಂಬರ್ 2024 ರಲ್ಲಿ ನಿವೃತ್ತಿಯಾದ ಗವರ್ನರ್ ಶಕ್ತಿಕಾಂತ ದಾಸ್ ಅವರಿಂದ ಸಹಿಯಾಗಿರುವ ಎಲ್ಲ ಹಳೆಯ ನೋಟುಗಳು ಸಹ ಕಾನೂನುಬದ್ಧ ಚಲಾವಣೆಯಲ್ಲಿ ಮುಂದುವರಿಯುತ್ತವೆ” ಎಂದು ಆರ್‌ಬಿಐ ತಿಳಿಸಿದೆ.













