Home News Ratan Tata: ರತನ್ ಟಾಟಾ ಒಡೆತನದ ದೇಶದ 7 ಐಷಾರಾಮಿ ಬ್ರ್ಯಾಂಡ್ ಗಳು ಇದೇ ನೋಡಿ!

Ratan Tata: ರತನ್ ಟಾಟಾ ಒಡೆತನದ ದೇಶದ 7 ಐಷಾರಾಮಿ ಬ್ರ್ಯಾಂಡ್ ಗಳು ಇದೇ ನೋಡಿ!

Hindu neighbor gifts plot of land

Hindu neighbour gifts land to Muslim journalist

Ratan tata: ರತನ್ ಟಾಟಾ ಮರಣ ಹೊಂದಿದ ನಂತರವು ಅವರು ಮಾಡಿದ ಸಾಧನೆ ಮತ್ತು ಕೊಡುಗೆಗಳು ಅಪಾರ ಮತ್ತು ಅಮರ. ಯಾಕೆಂದರೆ ಅವರು ನಮಗೆ ನೀಡಿದ ಕೊಡುಗೆಗಳು ಅಷ್ಟಿದೆ. ಅಲ್ಲದೇ ನೂರಕ್ಕೂ ಹೆಚ್ಚು ದೇಶಗಳಲ್ಲಿ ಉಪಸ್ಥಿತಿ ಹೊಂದಿರುವ ಟಾಟಾ ಗ್ರೂಪ್ 30 ಕಂಪನಿಗಳನ್ನು ಒಳಗೊಂಡಿದೆ. ಅವುಗಳಲ್ಲಿ ಹೆಚ್ಚು ಪ್ರಸಿದ್ದು ಪಡೆದ ಐಷಾರಾಮಿ ಬ್ರ್ಯಾಂಡ್ಗಳು ಯಾವುವು ಅನ್ನೋದರ ವಿವರ ಇಲ್ಲಿದೆ ನೋಡಿ.

ಝಾರಾ: 

ಭಾರತದಲ್ಲಿ 21 ಝಾರಾ ಮಳಿಗೆಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ವಿಶ್ವದ ಅತಿದೊಡ್ಡ ಜಾಗತಿಕ ಫ್ಯಾಷನ್ ಬ್ರ್ಯಾಂಡ್ ಗಳಲ್ಲಿ ಒಂದಾದ ಝಾರಾ ಟಾಟಾ ಗ್ರೂಪ್ ನ ಭಾಗವಾಗಿದೆ. ಸ್ಪ್ಯಾನಿಷ್ ಫ್ಯಾಷನ್ ಕಂಪನಿ ಇಂಡಿಟೆಕ್ಸ್ ಮತ್ತು ಟಾಟಾ ಜಂಟಿಯಾಗಿ ಝಾರಾವನ್ನು ನಡೆಸುತ್ತವೆ. 

ವೆಸ್ಟ್ ಸೈಡ್:

ವೆಸ್ಟ್ ಸೈಡ್ ಉತ್ಕೃಷ್ಟ ಶ್ರೇಣಿಯ ಉಡುಪುಗಳನ್ನು ಮಾರಾಟ ಮಾಡುತ್ತದೆ. ಟಾಟಾ ಗ್ರೂಪ್ ನ ಒಡೆತನದ ವಿವಿಧ ಬ್ರ್ಯಾಂಡ್ ಗಳನ್ನು ಒಳಗೊಂಡಿರುವ ಭಾರತದ ರಿಟೇಲ್ ಸಂಸ್ಥೆ ಟ್ರೆಂಡ್ ಲಿಮಿಟೆಡ್. ಟ್ರೆಂಡ್ ಲಿಮಿಟೆಡ್ ನ ಭಾಗವಾಗಿರುವ ವೆಸ್ಟ್ ಸೈಡ್, ದೇಶದ ಅತಿದೊಡ್ಡ ರಿಟೇಲ್ ಕೊಂಡಿ ಯಲ್ಲಿ ಒಂದಾಗಿದೆ. 

ಸ್ಟಾರ್ ಬಕ್ಸ್: 

2012 ರ ಅಕ್ಟೋಬರ್ ನಲ್ಲಿ ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಮತ್ತು ಸ್ಟಾರ್ ಬಕ್ಸ್ ಕಾಫಿ ಕಂಪನಿ ನಡುವಿನ ಜಂಟಿ ಉದ್ಯಮದ ಮೂಲಕ ಭಾರತಕ್ಕೆ ಕಾಲಿಟ್ಟಿತು. ದೇಶದಲ್ಲಿ ಇದು “ಟಾಟಾ ಸ್ಟಾರ್ಬಕ್ಸ್” ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತದೆ.

ಬಿಗ್ ಬಾಸ್ಕೆಟ್: 

ಬೆಂಗಳೂರು ಮೂಲದ ಭಾರತದ ಪ್ರಮುಖ ಆನ್ ಲೈನ್ ಸೂಪರ್ ಮಾರ್ಕೆಟ್ ಬಿಗ್ ಬಾಸ್ಕೆಟ್ ಪ್ರಸ್ತುತ ಟಾಟಾ ಗ್ರೂಪ್ ನ ಒಡೆತನದಲ್ಲಿದೆ. 2011 ರಲ್ಲಿ ಸ್ಥಾಪನೆಯಾದ ಬಿಗ್ ಬಾಸ್ಕೆಟ್ ಭಾರತದ ಮೊದಲ ಆನ್ ಲೈನ್ ದಿನಸಿ ವೇದಿಕೆಯಾಗಿದೆ. 2021 ರಲ್ಲಿ ಟಾಟಾ ಗ್ರೂಪ್ ಬಿಗ್ ಬಾಸ್ಕೆಟ್ ಅನ್ನು ಸ್ವಾಧೀನಪಡಿಸಿಕೊಂಡಿತು.

ಝುಡಿಯೋ:

ಟಾಟಾ ಗ್ರೂಪ್ ನ ವಿಭಾಗವಾದ ಟ್ರೆಂಟ್ ಲಿಮಿಟೆಡ್ ನ ಅಡಿಯಲ್ಲಿ ಇರುವ ಮತ್ತೊಂದು ಫ್ಯಾಷನ್ ಬ್ರ್ಯಾಂಡ್ ಝುಡಿಯೊ, ಸ್ಟೈಲಿಶ್, ಬಜೆಟ್ ಸ್ನೇಹಿ ಬಟ್ಟೆಗಳಿಂದಾಗಿ ಯುವ ಪೀಳಿಗೆಯಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ.

ಕಲ್ಟ್ ಫಿಟ್:

ಟಾಟಾ ಡಿಜಿಟಲ್ ಮತ್ತು ಝೊಮಾಟೊ ಬೆಂಬಲಿತ ಆರೋಗ್ಯ ಮತ್ತು ಫಿಟ್ ನೆಸ್ ವೇದಿಕೆಯಾಗಿದೆ. ಮನೆಯಿಂದಲೇ ಜೀವನಕ್ರಮವನ್ನು ಮಾಡಲು ಈ ವೆಬ್ ಸಹಾಯ ಮಾಡುತ್ತದೆ.