Home News ನಿರ್ಭಯಾ ಪ್ರಕರಣವನ್ನು ಹೋಲುವ ಇನ್ನೊಂದು ಪ್ರಕರಣ ಬೆಳಕಿಗೆ!! ಯುವಕನನ್ನು ಕಟ್ಟಿಹಾಕಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ-ಓರ್ವನ...

ನಿರ್ಭಯಾ ಪ್ರಕರಣವನ್ನು ಹೋಲುವ ಇನ್ನೊಂದು ಪ್ರಕರಣ ಬೆಳಕಿಗೆ!! ಯುವಕನನ್ನು ಕಟ್ಟಿಹಾಕಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ-ಓರ್ವನ ಬಂಧನ

Hindu neighbor gifts plot of land

Hindu neighbour gifts land to Muslim journalist

ಪ್ರಿಯತಮೆಯೊಂದಿಗೆ ಬೀಚ್ ಗೆ ತೆರಳಿದ್ದ ಯುವಕನನ್ನು ಅಡ್ಡಗಟ್ಟಿದ ಕುಡುಕರ ಗುಂಪೊಂದು ಕಟ್ಟಿಹಾಕಿ ಆತನೆದುರಲ್ಲೇ ಪ್ರಿಯತಮೆಯನ್ನು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಓರ್ವನನ್ನು ಬಂಧಿಸಿ ಉಳಿದವರಿಗೆ ಬಲೆ ಬೀಸಿದ್ದಾರೆ.

ಘಟನೆ ವಿವರ:ಪ್ರೀತಿಸುತ್ತಿದ್ದ ಜೋಡಿಯು ಆಂಧ್ರಪ್ರದೇಶದ ಪಲ್ಲಿಂಪಾಲೆ ಬೀಚ್ ಗೆ ತೆರಳಿದ್ದು, ಈ ವೇಳೆ ಕುಡಿತದ ನಶೆಯಲ್ಲಿದ್ದ ಯುವಕರ ಗುಂಪು ಜೋಡಿಯನ್ನು ಸುತ್ತುವರಿದು ಚುಡಾಯಿಸಿದೆ. ಈ ವೇಳೆ ಯುವಕರ ಗುಂಪಿನ ನಡುವೆ ಮಾತು ಬೆಳೆದಿದ್ದು, ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಆತನ ಎದುರಲ್ಲೇ ಪ್ರಿಯತಮೆಯನ್ನು ಅತ್ಯಾಚಾರ ನಡೆಸಿ ವಿಕೃತಿ ಮೆರೆದಿದ್ದಾರೆ ಎನ್ನಲಾಗಿದೆ.

ಬಳಿಕ ಮನೆಗೆ ಬಂದ ಯುವತಿ ಪ್ರೀತಿಸುತ್ತಿರುವ ವಿಚಾರ ಗೊತ್ತಾಗಬಾರದೆಂಬ ಕಾರಣಕ್ಕೆ ವಿಷಯ ಮುಚ್ಚಿಟ್ಟಿದ್ದು, ಈಕೆಯ ನಡವಳಿಕೆಯಿಂದ ಅನುಮಾನಗೊಂಡ ಯುವತಿಯ ಸಹೋದರ ಪ್ರಶ್ನಿಸಿದಾಗ ವಿಚಾರ ಬೆಳಕಿಗೆ ಬಂದಿದೆ.