Home News Prajwal Revanna: ಅತ್ಯಾಚಾರ ಪ್ರಕರಣ ಆರೋಪ: ಪ್ರಜ್ವಲ್‌ ರೇವಣ್ಣ ದೋಷಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು

Prajwal Revanna: ಅತ್ಯಾಚಾರ ಪ್ರಕರಣ ಆರೋಪ: ಪ್ರಜ್ವಲ್‌ ರೇವಣ್ಣ ದೋಷಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು

Prajwal Revanna Case

Hindu neighbor gifts plot of land

Hindu neighbour gifts land to Muslim journalist

Prajwal Revanna: ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ತೀರ್ಪು ಪ್ರಕಟಿಸಿದೆ. ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್, ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದರು. ಇದೀಗ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದಾರೆ.

ತೀರ್ಪು ಪ್ರಕಟಿಸುವ ಸಮಯದಲ್ಲಿ ಪ್ರಜ್ವಲ್‌ ರೇವಣ್ಣ ಕೋರ್ಟ್‌ ಹಾಲ್‌ನಲ್ಲಿದ್ದರು. ಶಿಕ್ಷೆಯ ಪ್ರಮಾಣ ಶನಿವಾರ ಪ್ರಕಟಗೊಳ್ಳಲಿದೆ. ತೀರ್ಪು ನೀಡುವ ಸಮಯದಲ್ಲಿ ಪ್ರಜ್ವಲ್‌ ರೇವಣ್ಣ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಇವರ ಮೇಲೆ ಇನ್ನೂ 3 ಕೇಸುಗಳು ಇದ್ದು, ಒಂದರಲ್ಲಿ ದೋಷಿ ಎಂಬ ತೀರ್ಪು ಬಂದಿದೆ. 

ಪ್ರಜ್ವಲ್‌ ರೇವಣ್ಣ ಮೇಲೆ ಸರಣಿ ಅತ್ಯಾಚಾರ ಆರೋಪವಿದ್ದು, ಇದರಲ್ಲಿ ಮೈಸೂರಿನ ಕೆ.ಆರ್‌.ನಗರದ ಮಹಿಳೆ ನೀಡಿದ ಅತ್ಯಾಚಾರ ಆರೋಪ ಕೂಡಾ ಒಂದು. ಅತ್ಯಾಚಾರ ಪ್ರಕರಣ ಬೆಳಕಿಗೆ ಬರಬಾರದು ಎಂದು ಮಹಿಳೆಯನ್ನು ಅಪಹರಣ ಮಾಡಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು ಎನ್ನುವ ಆರೋಪದಲ್ಲಿ ದೂರನ್ನು ದಾಖಲು ಮಾಡಲಾಗಿತ್ತು. ಮಾಜಿ ಸಚಿವ ಹೆಚ್‌ಡಿ ರೇವಣ್ಣ, ಭವಾನಿ ರೇವಣ್ಣ ಸೇರಿ ಒಟ್ಟು ಒಂಭತ್ತು ಆರೋಪಿಗಳು ಈ ಪ್ರಕರಣದಲ್ಲಿ ಇದ್ದಾರೆ.

ಕೆಆರ್‌ನಗರದ ಮಹಿಲೆ ಅಪಹರಣ ಪ್ರಕರಣದಲ್ಲಿ ಹೆಚ್‌ಡಿ ರೇವಣ್ಣ, ಭವಾನಿ ರೇವಣ್ಣ ಅವರಿಗೆ ಜಾಮೀನು ದೊರಕಿದೆ. ಆರೋಪಿ ಪ್ರಜ್ವಲ್‌ ರೇವಣ್ಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ವರ್ಷದಿಂದ ಇದ್ದಾರೆ.

ಇದನ್ನೂ ಓದಿ: Vice President Election: ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ.9 ರಂದು ಚುನಾವಣೆ: ಚುನಾವಣಾ ಆಯೋಗ ಘೋಷಣೆ