Home News Rayachur : ಭಿಕ್ಷೆಯೆತ್ತಿ ಸಂಗ್ರಹಿಸಿದ್ದ ₹ 1.80 ಲಕ್ಷ ಹಣವನ್ನ ದೇವಸ್ಥಾನ ನಿರ್ಮಾಣಕ್ಕೆ ದಾನ ಕೊಟ್ಟ...

Rayachur : ಭಿಕ್ಷೆಯೆತ್ತಿ ಸಂಗ್ರಹಿಸಿದ್ದ ₹ 1.80 ಲಕ್ಷ ಹಣವನ್ನ ದೇವಸ್ಥಾನ ನಿರ್ಮಾಣಕ್ಕೆ ದಾನ ಕೊಟ್ಟ ರಂಗಮ್ಮ!!

Hindu neighbor gifts plot of land

Hindu neighbour gifts land to Muslim journalist

Rayachur : ಗ್ರಾಮದ ಹಳೆಯ ಆಂಜನೇಯ ದೇಗುಲದ ಜೀರ್ಣೋದ್ಧಾರಕ್ಕೆ 60 ವರ್ಷದ ಭಿಕ್ಷುಕಿ ರಂಗಮ್ಮ ಅವರು ₹1.83 ಲಕ್ಷ ದೇಣಿಗೆ ನೀಡಿದಂತಹ ಅಪರೂಪದ ಘಟನೆ ರಾಯಚೂರು ತಾಲ್ಲೂಕಿನ ರಾಯಚೂರು-ಜಂಬಲದಿನ್ನಿ ಮಾರ್ಗದಲ್ಲಿರುವ ಬಿಜನಗೇರಾದಲ್ಲಿ ನಡೆದಿದೆ.

ಭಿಕ್ಷಾಟನೆ ಮಾಡುವ ಜನ ಬದುಕಲು ಅದನ್ನು ಮಾಡುತ್ತಾರೆ, ಆದರೆ ರಾಯಚೂರು ತಾಲೂಕಿನ ಬಿಜ್ಜನಗೆರಾ (Bijjangera) ಹೆಸರಿನ ಗ್ರಾಮದ ರಂಗಮ್ಮ ತಮ್ಮ ಬದುಕಿನಿಡೀ ಮಾಡಿದ ಸಂಪಾದನೆಯನ್ನು ಗ್ರಾಮದಲ್ಲಿರುವ ಮಾರೆಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ನೀಡಿದ್ದಾರೆ.

ಅಂದಹಾಗೆ 60 ವರ್ಷದ ರಂಗಮ್ಮ ಎಂಬುವವರು ಭಿಕ್ಷೆಯಿಂದ ಬಂದ ಹಣದಲ್ಲೇ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಸುಮಾರು 30 ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಬಂದು ಬಿಜನಗೇರಾ ಗ್ರಾಮದಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ರಂಗಮ್ಮ ಭಿಕ್ಷುಕಿಯಾದ್ರು ಮಹಾದಾನಿಯಾಗಿದ್ದಾಳೆ. ಯಾರ ಬಳಿಯೂ ಮಾತನಾಡದ ವೃದ್ಧೆ ಡಬ್ಬಿ, ಗಂಟುಗಳಲ್ಲಿ ಕೂಡಿಟ್ಟಿದ್ದ ಹಣ ಆಕಸ್ಮಿಕವಾಗಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಗ್ರಾಮಸ್ಥರೇ ಹಣವನ್ನ ಎಣಿಸಿ, ಈ ಹಣ ಏನು ಮಾಡುತ್ತಿಯಾ ಅಂತ ವೃದ್ಧೆಯನ್ನ ಕೇಳಿದ್ದಾರೆ. ಆಗ ಅವರು ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ

ಇನ್ನೂ ಗ್ರಾಮದ ಮುಖಂಡರೆಲ್ಲ ಸೇರಿ ರಂಗಮ್ಮ ಚೀಲದಲ್ಲಿ ಇಟ್ಟಿದ್ದ ಹಣ ಎಣಿಕೆ ಮಾಡಿದಾಗ ₹1.83 ಲಕ್ಷ ಇರುವುದು ಗೊತ್ತಾಗಿದೆ. ಗ್ರಾಮಸ್ಥರು ಭಿಕ್ಷುಕಿಗಾಗಿ ಚಿಕ್ಕದಾದ ಟಿನ್‌ಶೀಟ್‌ ಶೆಡ್‌ ಕಟ್ಟಿಸಿಕೊಟ್ಟಿದ್ದಾರೆ. ಅವರ ಒಪ್ಪಿಗೆಯಂತೆ ಉಳಿದ ಹಣವನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿದ್ದೇವೆ’ ಎಂದು ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಬಸವರಾಜ ಯಾದವ ತಿಳಿಸಿದರು.

Vachanananda Shri: ಧರ್ಮಸ್ಥಳ ಪ್ರಕರಣ – ಹೆಗ್ಗಡೆಯವರ ಪರ ವಹಿಸಿದ ವಚನಾನಂದ ಶ್ರೀ!!