Home News Ramadan 2025: ಮಸೀದಿಗಳಿಗೆ ಉಚಿತ ಅಕ್ಕಿ ಘೋಷಣೆ ಮಾಡಿದ ತಮಿಳುನಾಡು ಸರಕಾರ

Ramadan 2025: ಮಸೀದಿಗಳಿಗೆ ಉಚಿತ ಅಕ್ಕಿ ಘೋಷಣೆ ಮಾಡಿದ ತಮಿಳುನಾಡು ಸರಕಾರ

Ramzan Fasting

Hindu neighbor gifts plot of land

Hindu neighbour gifts land to Muslim journalist

Ramadan 2025: ಮುಸ್ಲಿಮರು ರಂಜಾನ್‌ ಸಮಯದಲ್ಲಿ ಮಸೀದಿಗಳಲ್ಲಿ ಉಪವಾಸದ ಗಂಜಿ ನೀಡಲಾಗುವುದು. ಇದೀಗ ತಮಿಳುನಾಡು ಸರಕಾರ ಇದಕ್ಕೆ ಅಕ್ಕಿ ನೀಡಲಿದೆ. ತಮಿಳುನಾಡು ಸರಕಾರದಿಂದ ಬಿಡುಗಡೆಯಾದ ಹೇಳಿಕೆಯಲ್ಲಿ ಉಪವಾಸ ಮಾಡುವ ಮುಸ್ಲಿಮರಿಗೆ ಉಪವಾಸ ಗಂಜಿ ತಯಾರು ಮಾಡಲು ತಮಿಳುನಾಡು ಸರಕಾರ ಪ್ರತಿ ವರ್ಷ ಮಸೀದಿಗಳಿಗೆ ಅಕ್ಕಿಯನ್ನು ನೀಡುತ್ತಿದೆ ಎಂದು ಹೇಳಿದೆ.

ರಂಜಾನ್‌ ಸಮಯದಲ್ಲಿ ಉಪವಾಸದ ಆಹಾರ ತಯಾರು ಮಾಡಲು ಮಸೀದಿಗಳಿಗೆ ಅಕ್ಕಿ ನೀಡುವಂತೆ ಮುಸ್ಲಿಮರಿಂದ ಹಿಂದಿನ ವರ್ಷಗಳ ರೀತಿಯಲ್ಲಿಯೇ ಈ ಬಾರಿ ಕೂಡಾ ಕೊಡಲು ಮನವಿ ಸ್ವೀಕಾರ ಮಾಡಲಾಗಿದೆ. ಮಸೀದಿಗಳಿಗೆ ಹಸಿ ಅಕ್ಕಿ ನೀಡಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಆದೇಶ ನೀಡಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮಸೀದಿಗಳಿಗೆ ನೀಡಲಿರುವ ಒಟ್ಟು ಅಕ್ಕಿ ಪ್ರಮಾಣದ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಲಾಗಿರುವ ಕುರಿತು ವರದಿಯಾಗಿದೆ. ಮಸೀದಿಗಳಿಗೆ 7,920 ಮೆಟ್ರಿಕ್‌ ಟನ್‌ ಅಕ್ಕಿ ನೀಡುವ ಕುರಿತು ಸರಕಾರ ಹೇಳಿದೆ. ಇದಕ್ಕಾಗಿ ಸರಕಾರ 18 ಕೋಟಿ 41 ಲಕ್ಷ 40 ಸಾವಿರ ರೂಪಾಯಿ ಹೆಚ್ಚುವರಿ ಖರ್ಚಿನ ಕುರಿತು ಪ್ರಕಟಣೆಯಲ್ಲಿ ಪ್ರಕಟವಾಗಿದೆ.