Home News Vinay- Rajath: ಬಿಗ್ ಬಾಸ್ ಖ್ಯಾತಿಯ ರಜತ್, ವಿನಯ್ ಗೌಡ ಅರೆಸ್ಟ್

Vinay- Rajath: ಬಿಗ್ ಬಾಸ್ ಖ್ಯಾತಿಯ ರಜತ್, ವಿನಯ್ ಗೌಡ ಅರೆಸ್ಟ್

Hindu neighbor gifts plot of land

Hindu neighbour gifts land to Muslim journalist

 

Vinay-Rajath: ರಿಯಲ್ ಹುಚ್ಚಾಟ ಏನು ಬೇಕಾದರೂ ಮಾಡಿಸುತ್ತದೆ. ಆದರೆ ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಹೀಗಾಗಿ ರೀಲ್ಸ್ ಗಾಗಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ ಹಾಗೂ ಕಿರುತೆರೆ ನಟರಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.

 

ಹೌದು, ರೀಲ್ಸ್ ಮಾಡುವಾಗ ಲಾಂಗ್ ಪ್ರದರ್ಶನ ಮಾಡಿದ್ದ ರಜತ್ ಕಿಶನ್ ಹಾಗೂ ವಿನಯ್ ಗೌಡ ಇಬ್ಬರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ವಿಚಾರವಾಗಿ ವಿಚಾರಣೆಗೆ ಹಾಜರಾಗುವಂತೆಯೂ ಇಬ್ಬರಿಗೆ ನೋಟಿಸ್ ಕಳುಹಿಸಲಾಗಿತ್ತು. ವಿನಯ್ ಗೌಡ ಅವರು ಆರ್​ಆರ್ ನಗರ ಪೊಲೀಸ್ ಠಾಣೆಗೆ ಹಾಜರಾದರೆ ರಜತ್ ಅವರ ಪತ್ನಿ ಠಾಣೆಗೆ ಬಂದಿದ್ದರು. ರಜತ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರ ಬೆನ್ನಲ್ಲಿಯೇ ಈಗ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

 

ಅಂದಹಾಗೆ ಬುಜ್ಜಿ ಅನ್ನೋ ರಜತ್ ಅವರ ಇನ್​ಸ್ಟಾಗ್ರಾಮ್ ಅಕೌಂಟ್ ನಲ್ಲಿ ಸುಮಾರು 18 ಸೆಕೆಂಡ್ಗಳ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಸಾವರ್ಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಪ್ರದರ್ಶನ ಹಾಗೂ ಭಯಭೀತಿ ಸೃಷ್ಟಿ ಅಂತ ಕೇಸ್ ದಾಖಲಾಗಿತ್ತು. ಸುಮ್ನೆ ಸ್ಟೈಲ್ ಮಾಡಿ ವಿಡಿಯೋ ಮಾಡಲು ಹೋಗಿ ಇಬ್ಬರು ನಟರು ಅರೆಸ್ಟ್ ಆಗಿದ್ದಾರೆ. ಮಂಗಳವಾರ ಬೆಳಿಗ್ಗೆ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.