Home News Rajasthan: ಕಾರಲ್ಲೇ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಸ್ವಾಮೀಜಿಯ ಚಕ್ಕಂದ !! ವಿಡಿಯೋ ಕಂಡು ನೆಟ್ಟಿಗರ ಆಕ್ರೋಶ

Rajasthan: ಕಾರಲ್ಲೇ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಸ್ವಾಮೀಜಿಯ ಚಕ್ಕಂದ !! ವಿಡಿಯೋ ಕಂಡು ನೆಟ್ಟಿಗರ ಆಕ್ರೋಶ

Hindu neighbor gifts plot of land

Hindu neighbour gifts land to Muslim journalist

Rajasthan: ಸ್ವಾಮಿಗಳೆಂದರೆ ಅಥವಾ ಸನ್ಯಾಸತ್ವವನ್ನು ಸ್ವೀಕರಿಸಿ ಕಾವಿ ಧರಿಸಿದವರೆಂದರೆ ಅವರು ಸಮಾಜವನ್ನು ತಿದ್ದುವ, ಸರಿದಾರಿಯಲ್ಲಿ ನಡೆಸುವ, ಎಲ್ಲರನ್ನೂ ಹರಸಿ ಮಾದರಿಯಾಗುವಂತಹ ಕೆಲಸಗಳನ್ನು ಮಾಡಬೇಕು. ಇಂದು ಇಂತದ್ದೇ ದಾರಿಯಲ್ಲಿ ನೋಡುವ ಅನೇಕ ಗುರುವರ್ಯರನ್ನು ನಾವು ಕಾಣಬಹುದು. ಆದರೆ ಇನ್ನು ಕೆಲವು ಸ್ವಾಮೀಗಳು ಇವುಗಳನ್ನು ಬಿಟ್ಟು ಮತ್ತೆಲ್ಲಾ ಕೆಲಸವನ್ನು ಮಾಡುತ್ತಿದ್ದಾರೆ. ಅದರಲ್ಲೂ ಕೆಲವರಂತೂ ರತಿ ಕ್ರೀಡೆಯಲ್ಲಿ ಎತ್ತಿದ ಕೈ. ಅಂತೆಯೇ ಇದೀಗ ಬಾಬಾ ಅಥವಾ ಸ್ವಾಮೀಜಿ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬರ ರಾಸಲೀಲೆ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಹೌದು, ರಾಜಸ್ಥಾನದ(Rajasthan) ಪ್ರಮುಖ ಆಧ್ಯಾತ್ಮಿಕ ಗುರು ಬಾಬಾ ಬಾಲಕ್‍ನಾಥ್ ಅವರು ಕಾರಿನೊಳಗೆ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ವಿಡಿಯೋ ಕಂಡು ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ಕಾಲೇಜು ವಿದ್ಯಾರ್ಥಿನಿ ಒಂದು ವರ್ಷದ ಹಿಂದೆ ಖೇಡಿ ದಂತುಲ್ಜಾದ ಕ್ಷೇತ್ರಪಾಲ್ ದೇವಸ್ಥಾನದಲ್ಲಿ ತನ್ನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬಾಬಾ ಬಾಲಕ್‍ನಾಥ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದಾಳಂತೆ. ತಂತ್ರ ಮತ್ತು ಮಂತ್ರ ವಿದ್ಯೆಗಳನ್ನು ಬಳಸಿಕೊಂಡು ಅವಳ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಬಾಬಾ ಹೇಳಿದ್ದರು ಎನ್ನಲಾಗಿದೆ. ಆದರೆ ಸಮಸ್ಯೆಗೆ ಪರಿಹಾರ ನೀಡುವ ಬದಲು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಂದಹಾಗೆ ರಾಜಸ್ಥಾನದ ಸಿಕಾರ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಡಿಯೊ ವೈರಲ್ ಆದ ನಂತರ ಅಧಿಕಾರಿಗಳು ಬಾಬಾ ಬಾಲಕ್‍ನಾಥ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಘಟನೆಯು ಧಾರ್ಮಿಕ ಮುಖಂಡರ ಮೇಲೆ ಇಟ್ಟಿರುವ ನಂಬಿಕೆಯನ್ನು ಅನೇಕರು ಪ್ರಶ್ನಿಸುವಂತೆ ಮಾಡಿದೆ. ಈ ವೈರಲ್ ವಿಡಿಯೊಗೆ ಅನೇಕರು ಕಮೆಂಟ್ ಮಾಡಿ ತಮ್ಮ ಕೋಪ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.