Home News Rajasthan: ‘ಕಾಂಡೋಮ್ ಹಾಕಿ ಸೆಕ್ಸ್ ಮಾಡ್ಬೇಡ’ ಎಂದು ಹೆಂಡ್ತಿಯ ರೋಧನೆ – ಅಸಲಿ ಸತ್ಯ ತಿಳಿಯುತ್ತಿದ್ದಂತೆ...

Rajasthan: ‘ಕಾಂಡೋಮ್ ಹಾಕಿ ಸೆಕ್ಸ್ ಮಾಡ್ಬೇಡ’ ಎಂದು ಹೆಂಡ್ತಿಯ ರೋಧನೆ – ಅಸಲಿ ಸತ್ಯ ತಿಳಿಯುತ್ತಿದ್ದಂತೆ ಹೌಹಾರಿದ ಗಂಡ !!

Hindu neighbor gifts plot of land

Hindu neighbour gifts land to Muslim journalist

Rajasthan: ಲೈಂಗಿಕತೆ ಎಂಬುದು ದಾಂಪತ್ಯ ಜೀವನದ ಒಂದು ಭಾಗ. ಈ ಕುರಿತು ಗಂಡ-ಹೆಂಡತಿಯ ಒಮ್ಮತದ ನಿರ್ಧಾರ ಕೈಗೊಂಡು ಜೀವನ ನಡೆಸಿದರೆ ಅದು ಸುಖ-ನೆಮ್ಮದಿಗಳಿಂದ ಕೂಡಿರುತ್ತದೆ. ಇಂದು ಅನೇಕರು ಮದುವೆ ಆದ ತಕ್ಷಣ ಮಕ್ಕಳು ಬೇಡವೆಂದು ಸುರಕ್ಷತೆ ಬಳಸಿ ಲೈಂಗಿಕ ಸಂಪರ್ಕ ಬೆಳೆಸುತ್ತಾರೆ. ಇದಕ್ಕೆ ಇಬ್ಬರ ಒಪ್ಪಿಗೆ ಇರಲೇ ಬೇಕು. ಆದರೆ ಇಲ್ಲೊಂದೆಡೆ ಶಾರೀರಿಕ ಸಂಬಂಧ (Physical relationship) ಬೆಳೆಸುವ ವೇಳೆ ಸುರಕ್ಷತೆಗಾಗಿ ಕಾಂಡೋಮ್ ಬಳಸೋದೇ ಬೇಡ ಎಂದು ಗಂಡನಿಗೆ ಪತ್ನಿ ಹೇಳ್ತಿದ್ದಳು. ಪತ್ನಿ ವರ್ತನೆ ಪತಿಗೆ ಅನುಮಾನ ಮೂಡಿಸಿದೆ. ಸೂಕ್ತ ಪ್ಲಾನ್ ಮಾಡಿ ಪತ್ನಿ ಹಿಂದೆ ಬಿದ್ದವನಿಗೆ ಸತ್ಯ (true) ತಿಳಿಯುತ್ತಿದ್ದಂತೆ ಜೀವ ಬಾಯಿಗೆ ಬಂದಂತಾಗಿದೆ.

ಹೌದು, ರಾಜಸ್ಥಾನ (Rajasthan)ದ ಮಾತಾ ಕಾ ಥಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹ ಒಂದು ವಿಚಿತ್ರ ಘಟನೆ ನಡೆದಿದೆ. ಜೀವನ ಸಂಗಾತಿಯಾಗಿ ಜೀವನ ಪರ್ಯಂತ ಜೊತೆಗಿರ್ತೇನೆ ಎಂದು ಭರವಸೆ ನೀಡಿದ್ದ ಮಡದಿಯೇ ಮೋಸ ಮಾಡಿದ್ದಾಳೆ. ಪ್ರಕರಣ ಕೋರ್ಟ್ (Court) ಮೆಟ್ಟಿಲೇರಿದ ಮೇಲೆ ವಿಷ್ಯ ಬಹಿರಂಗವಾಗಿದ್ದು, ಮಹಿಳೆ ಮೋಸ ಕೇಳಿ ಜನರು ದಂಗಾಗಿದ್ದಾರೆ.

ಅಂದಹಾಗೆ ಈ ದಂಪತಿಗೆ ಜುಲೈನಲ್ಲಿ ಮದುವೆ ಆಗಿದೆ. ಇವರಲ್ಲಿ ಮಹಿಳೆಗೆ ಮೊದಲು ಬೇರೆ ವ್ಯಕ್ತಿ ಜೊತೆ ಪತ್ನಿಗೆ ನಿಶ್ಚಿತಾರ್ಥವಾಗಿತ್ತು. ಆದ್ರೆ ನಿಶ್ಚಿತಾರ್ಥದ ನಂತ್ರ ಮದುವೆ ಮುರಿದು ಬಿದ್ದಿತ್ತು. ಪತ್ನಿ ಫೋನ್ ನಲ್ಲಿದ್ದ ನಂಬರ್ ಪರಿಶೀಲನೆ ನಡೆಸಿದಾಗ ಮೊದಲ ವ್ಯಕ್ತಿ ಏಕೆ ಮದುವೆ ಮುರಿದುಕೊಂಡಿದ್ದಾನೆ ಎಂಬ ಸಂಗತಿ ಪತಿಗೆ ತಿಳಿಯಿತು. ಹೀಗಾಗಿ ಗಂಡ ಪತ್ನಿಯ ಆರೋಗ್ಯ ಪರೀಕ್ಷೆಗೆ ಮುಂದಾಗ್ತಾನೆ. ಇದನ್ನು ಪತ್ನಿ ನಿರಾಕರಿಸ್ತಾಳೆ. ಆಕೆ ಮನೆಯವರಿಂದಲೂ ವಿರೋಧ ಬರುತ್ತೆ. ಆದ್ರೆ ಪತ್ನಿಯನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಕರೆದೊಯ್ಯುವ ಪತಿ, ರಕ್ತ ಪರೀಕ್ಷೆ (blood test) ಮಾಡಿಸ್ತಾನೆ. ಪರೀಕ್ಷಾ ವರದಿ ನೋಡಿ ಪತಿ ದಂಗಾಗ್ತಾನೆ. ಪತ್ನಿಗೆ ಎಚ್ ಐವಿ ಪಾಸಿಟಿವ್ (HIV positive) ಇರೋದು ಆತನಿಗೆ ತಿಳಿಯುತ್ತದೆ !!

ಇನ್ನು ಪತ್ನಿಗೆ ಈ ವಿಷ್ಯ ಮೊದಲೇ ತಿಳಿದಿತ್ತು. ಆದ್ರೆ ಎಚ್ ಐವಿ ವಿಷ್ಯವನ್ನು ಮುಚ್ಚಿಟ್ಟು ಆಕೆ ಮದುವೆಯಾಗಿದ್ದಳು. ಪತಿಗೆ ತನ್ನ ಖಾಯಿಲೆ ವಿಷ್ಯ ತಿಳಿಯುತ್ತಿದ್ದಂತೆ ಸಹೋದರಿ ಜೊತೆ ಪತ್ನಿ ಮನೆ ಬಿಟ್ಟಿದ್ದಾಳೆ. ಸಹೋದರಿ ಜೊತೆ ರೂಮ್ ಸೇರಿ ಸ್ವಲ್ಪ ಹೊತ್ತು ಬಾಗಿಲು ಹಾಕಿಕೊಂಡಿದ್ದ ಪತ್ನಿ, ನಂತ್ರ ಸೂಟ್ ಕೇಸ್ ಹಿಡಿದು, ಮನೆಯಿಂದ ಹೊರಗೆ ಹೋಗಿದ್ದಾಳೆ. ಆಕೆ ಹೋದ್ಮೇಲೆ ಮನೆಯಲ್ಲಿದ್ದ ಎಲ್ಲ ಒಡವೆಯನ್ನು ಹೊತ್ತೊಯ್ದಿದ್ದಾಳೆ ಎಂಬುದು ಪೀಡಿತನಿಗೆ ಗೊತ್ತಾಗಿದೆ.

ಪತ್ನಿ ವರ್ತನೆಗೆ ದಂಗಾಗಿರುವ ಪತಿ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾನೆ. ಪತ್ನಿ, ನನಗೂ ಎಚ್ ಐವಿ ಸೋಂಕು ಹರಡುವ ಉದ್ದೇಶ ಹೊಂದಿದ್ದಳು. ಇದೇ ಕಾರಣಕ್ಕೆ ಆಕೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ಬಳಸದಂತೆ ಒತ್ತಾಯ ಮಾಡುತ್ತಿದ್ದಳು ಎಂದು ಪತಿ ದೂರಿದ್ದಾನೆ.