Home News Rain: ಅನಂತಾಡಿ: ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಮರ; ಚಾಲಕನಿಗೆ ಗಾಯ

Rain: ಅನಂತಾಡಿ: ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಮರ; ಚಾಲಕನಿಗೆ ಗಾಯ

Hindu neighbor gifts plot of land

Hindu neighbour gifts land to Muslim journalist

Rain: ಅನಂತಾಡಿ: ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಮತ್ತೊಂದು ಅನಾಹುತ ಸಂಭವಿಸಿದೆ. ಅನಂತಾಡಿಯ ಗೋಳಿಕಟ್ಟೆ ಎಂಬಲ್ಲಿ ಬಿರುಸಿನ ಗಾಳಿ ಮತ್ತು ಮಳೆಗೆ ಬೃಹತ್‌ ಮರವೊಂದು ಚಲಿಸುತ್ತಿದ್ದ ಆಟೋರಿಕ್ಷಾದ ಮೇಲೆ ಉರುಳಿಬಿದ್ದಿರುವ ಘಟನೆ ನಡೆದಿದೆ.

ಈ ಘಟನೆಯಲ್ಲಿ ಆಟೋ ಚಾಲಕ ಪ್ರಕಾಶ್‌ ಎಂಬುವವರಿಗೆ ಗಾಯಗಳಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಮರ ಬಿದ್ದ ಪರಿಣಾಮ ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ.

ವಿಟ್ಲ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.