Home News Python: ಕೇರಳ: ಹೆಬ್ಬಾವು ಬೇಟೆಯಾಡಿ ಮಾಂಸ ಮಾಡಿ ಬೇಯಿಸಿ ತಿಂದ ಇಬ್ಬರು, ಬಂಧನ

Python: ಕೇರಳ: ಹೆಬ್ಬಾವು ಬೇಟೆಯಾಡಿ ಮಾಂಸ ಮಾಡಿ ಬೇಯಿಸಿ ತಿಂದ ಇಬ್ಬರು, ಬಂಧನ

Image Credit: Tv9 Kannada

Hindu neighbor gifts plot of land

Hindu neighbour gifts land to Muslim journalist

Python: ಹೆಬ್ಬಾವನ್ನು ಬೇಟೆಯಾಡಿ ಅದರ ಮಾಂಸವನ್ನು ಬೇಯಿಸಿ ತಿಂದ ಆರೋಪದ ಮೇಲೆ ಅರಣ್ಯಾಧಿಕಾರಿಗಳು ಕೇರಳದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಪ್ರಮೋದ್‌ ಮತ್ತು ಬಿನೀಶ್‌ ಆರೋಪಿಗಳು.

ಬುಧವಾರ ಇವರಿಬ್ಬರು ಸಂಜೆ ತಮ್ಮ ಮನೆಗಳ ಸಮೀಪದ ರಬ್ಬರ್‌ ತೋಟದಲ್ಲಿ ಹೆಬ್ಬಾವು ಬೇಟೆಯಾಡಿದ್ದು, ನಂತರ ಪ್ರಮೋದ್‌ ತನ್ನ ಮನೆಯಲ್ಲಿ ಅದರ ಮಾಂಸದ ಸಾರು ಮಾಡಿದ್ದರು.

ಇದನ್ನು ತಿಳಿದ ಥಳಿಪರಂಬ ರೇಂಜ್‌ ಆಫೀಸರ್‌ ಸುರೇಶ್‌ ಪಿ ಮತ್ತು ಅವರ ತಂಡ ಮನೆಯ ಮೇಲೆ ದಾಳಿ ಮಾಡಿದ್ದು, ಹಾವಿನ ಭಾಗಗಳು, ಬೇಯಿಸಿದ ಖಾದ್ಯವನ್ನು ವಶಪಡಿಸಿದೆ. ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಳ್ತಂಗಡಿ SIT ಕಛೇರಿಗೆ ರಾತ್ರೋರಾತ್ರಿ ತಿಮರೋಡಿ ದೌಡು, ದೂರು ಸಲ್ಲಿಕೆ!

ಇವರಿಬ್ಬರನ್ನೂ ಗುರುವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಹಾಗೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುವ ಕುರಿತು ಅಧಿಕಾರಿಗಳು ತಿಳಿಸಿದ್ದಾರೆ.