Home News Puttur: ಪುತ್ತೂರು: ಶಾಸಕರ ಕಾರು ಅಡ್ಡಗಟ್ಟಿ ವಿದ್ಯಾರ್ಥಿನಿ !

Puttur: ಪುತ್ತೂರು: ಶಾಸಕರ ಕಾರು ಅಡ್ಡಗಟ್ಟಿ ವಿದ್ಯಾರ್ಥಿನಿ !

Hindu neighbor gifts plot of land

Hindu neighbour gifts land to Muslim journalist

Puttur: ಜೂ.15ರಂದು ಸಂಜೆ (Puttur) ಆರ್ಯಾಪು ಗ್ರಾಮದ ಸಂಟ್ಯಾ‌ರ್ ಕಲ್ಲಕಟ್ಟದಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆಗೆ ಶಾಸಕ ಅಶೋಕ್‌ ರೈ ತೆರಳಿದ್ದರು. ರಸ್ತೆ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಬರುವ ವೇಳೆ ಶಾಸಕರ ಕಾರಿಗೆ ಬಾಲಕಿಯೋರ್ವರು ಅಡ್ಡಿ ನಿಂತಿದ್ದಾಳೆ. ಕಾರು ನಿಲ್ಲಿಸಿದ ಕೂಡಲೇ ಶಾಸಕರ ಬಳಿ ಓಡೋಡಿ ಬಂದ ಬಾಲಕಿ ಅಶೋಕಣ್ಣ ನಮ್ಮ ಮನೆ ಸೋರುತಿದೆ, ಮಲಗಲು ಆಗುತ್ತಿಲ್ಲ, ಓದಲು ಬರೆಯಲು ಆಗುತ್ತಿಲ್ಲ, ನೀವು ರಿಪೇರಿ ಮಾಡಲು ಹಣದ ಅಭಾವ ಎಂದಿದ್ದಾಳೆ. ಪುಟ್ಟ ಬಾಲಕಿಯ ಮನವಿಯನ್ನು ಕೇಳಿ ಕಾರಿನಿಂದ ಇಳಿದ ಶಾಸಕರು ಸ್ಥಳೀಯ ಬೂತ್ ಅಧ್ಯಕ್ಷರನ್ನು ಕರೆಸಿ ಬಾಲಕಿಯ ಮನೆಯ ವಿಚಾರವನ್ನು ತಿಳಿದುಕೊಂಡರು. ಕೂಡಲೇ ಶಾಸಕರು ನಿಮ್ಮ ಮನೆಗೆ ನಾನು ಶೀಟು ಹಾಕಿ ಕೊಡುತ್ತೇನೆ, ನೀನು ಹಾಸ್ಟೆಲ್‌ನಲ್ಲಿ ಕಲಿಯುವ ಆಸಕ್ತಿ ಇದ್ದರೆ ಅದಕ್ಕೂ ವ್ಯವಸ್ಥೆ ಮಾಡಿಕೊಡುತ್ತೇನೆ, ಬರೆಯುವ ಪುಸ್ತಕ ಬೇಕಿದ್ದರೆ ಅದನ್ನೂ ಮಾಡಿಕೊಡುತ್ತೇನೆ ಎಂದು ಬಾಲಕಿಯನ್ನು ಸಮಾಧಾನ ಪಡಿಸಿದ್ದಾರೆ