Home News ಪುನೀತ್ ನಂತರ ಎಳೆಯ ಪ್ರಾಯದಲ್ಲೇ ಹೃದಯಾಘಾತಕ್ಕೆ ಒಳಗಾದ ಮತ್ತೋರ್ವ ಸೆಲೆಬ್ರಿಟಿ | 31 ರ ಮಹಿಳಾ...

ಪುನೀತ್ ನಂತರ ಎಳೆಯ ಪ್ರಾಯದಲ್ಲೇ ಹೃದಯಾಘಾತಕ್ಕೆ ಒಳಗಾದ ಮತ್ತೋರ್ವ ಸೆಲೆಬ್ರಿಟಿ | 31 ರ ಮಹಿಳಾ ಉದ್ಯಮಿ ಶ್ರೀವಾಸ್ತವ ಹೃದಯ ಸ್ತಂಭನದಿಂದ ನಿಧನ

Hindu neighbor gifts plot of land

Hindu neighbour gifts land to Muslim journalist

ನವದೆಹಲಿ: ಭಾರತದ ಮಹಿಳಾ ಯುವ ಉದ್ಯಮಿ ಹಾಗೂ ಮಹಿಳಾ ಕೇಂದ್ರಿತ ಸಾಮಾಜಿಕ ಉದ್ಯಮದ ಸಂಸ್ಥಾಪಕಿ ಪಂಖೂರಿ ಶ್ರೀವಾಸ್ತವ ಅವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ.

32 ವರ್ಷ ವಯಸ್ಸಿನ ಪಂಖೂರಿ ಅವರು ಡಿ.24ರಂದು ಹೃದಯ ಸ್ತಂಭನದಿಂದ ನಿಧನರಾದರು. ಸಿಇಒ ಪಂಖೂರಿ ಇನ್ನಿಲ್ಲ ಎನ್ನುವ ದುಃಖ ನಮ್ಮನ್ನು ಆವರಿಸಿದೆ ಎಂದು ಪಂಖೂರಿ ಅವರ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸಂತಾಪ ಸೂಚಿಸಿ ಟ್ವೀಟ್‌ ಮಾಡಲಾಗಿದೆ.

ಲೈವ್‌ ಸ್ಟ್ರೀಮಿಂಗ್‌, ಚಾಟ್‌ ಮತ್ತು ಮೈಕ್ರೋ-ಕೋರ್ಸ್‌ಗಳ ಮೂಲಕ ಆನ್‌ಲೈನ್‌ ಶಾಪಿಂಗ್‌ ಮಾಡಲು ಪಂಖೂರಿ ಅವರ ಸಿಕ್ವೊಯಾ ಕ್ಯಾಪಿಟಲ್-ಬೆಂಬಲಿತ ಸಾಮಾಜಿಕ ಸಮುದಾಯವು ವೇದಿಕೆ ಒದಗಿಸಿತ್ತು. ಅವರು 2016ರಲ್ಲಿ ಆನ್‌ಲೈನ್‌ ಜಾಹೀರಾತು ಕಂಪನಿ ಕ್ವಿಕರ್‌ ಅನ್ನು ಸ್ವಾಧೀನಪಡಿಸಿಕೊಂಡು ರೀಟೈಲ್‌ ಸ್ಟಾರ್ಟ್‌-ಅಪ್‌ ಗ್ರಾಬ್‌ ಹೌಸ್‌ ಸ್ಥಾಪಿಸಿದ್ದರು.

ಝಾನ್ಸಿ ಮೂಲದವರಾದ ಶ್ರಿವಾತ್ಸವ ಅವರು ರಾಜೀವ್‌ ಗಾಂಧಿ ತಾಂತ್ರಿಕ ವಿವಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದರು. ಇದೀಗ ಸಣ್ಣ ಪ್ರಾಯದಲ್ಲೇ ತೀರಿಕೊಂಡು ಇಹ ಲೋಕ ತ್ಯಜಿಸಿದ್ದಾರೆ.