Home News Pratap Simha: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ: ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್

Pratap Simha: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ: ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್

Hindu neighbor gifts plot of land

Hindu neighbour gifts land to Muslim journalist

Pratap Simha: ಸೆ.21 ರಂದು ಗಣೇಶ ವಿಸರ್ಜನೆ ಶೋಭಾಯಾತ್ರೆ ಮೆರವಣಿಗೆ ವೇಳೆ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಡಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರತಾಪ್ ಸಿಂಹ ಅವರು, ಗಣೇಶ ವಿಸರ್ಜನೆ ವೇಳೆ ಎಲ್ಲಾ ಕಡೆ ಕಲ್ಲು ತೂರುವ ಘಟನೆ ಈಗಾಗಲೇ ಬೆಳಕಿಗೆ ಬಂದಿದೆ. ಕಲ್ಲು ಹೊಡೆಯುವ ಅಭ್ಯಾಸ ಮುಸ್ಲಿಮರಿಗೆ ಯಾಕೆ ಬರುತ್ತೆ? ಹಿಂದೂಗಳು ಕೈಯಲ್ಲಿ ಕಲ್ಲು ಹೀಡಿದುಕೊಂಡರೆ ನಿಮ್ಮ ಕಥೆ ಏನು ಆಗುತ್ತೆ? ನ್ಯೂಕ್ಲಿಯರ್ ಬಾಂಬ್ ಮಾಡಿದ ಹಿಂದೂಗಳಿಗೆ ಪೆಟ್ರೋಲ್ ಬಾಂಬ್ ಮಾಡೋಕೆ ಬರಲ್ವಾ ಎಂದು ಪ್ರತಾಪ್ ಸಿಂಹ ಮಾತನಾಡಿದ್ದರು.

ಟಾಂಗಾಗಳು, ಗುಜರಿಗಳು ಮಾಡುವ ಕೆಲಸವನ್ನು ಕ್ಷಣ ಮಾತ್ರದಲ್ಲಿ ಹಿಂದೂಗಳಿಗೆ ಮಾಡಲು ಬರುತ್ತದೆ ಎಂದಿದ್ದರು. ಹೀಗೆ ಧಾರ್ಮಿಕ ನಂಬಿಕೆಗಳಿಗೆ ಅವಮಾನಗೊಳಿಸಿ ಪ್ರತಾಪ್ ಅವರು ದ್ವೇಷ ಭಾವನೆಯಿಂದ ಮಾತನಾಡಿದ್ದಾರೆ ಎಂದು ಆರೋಪಿಸಿ ಶಹಾಪುರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಇದೀಗ ಶಹಾಪುರ ಪಿಎಸ್‌ಐ ಡಿ.ವಿ.ನಾಯಕ ಅವರಿಂದ ಸ್ವಕೃತ ದೂರು ದಾಖಲಾಗಿದ್ದು, ಬಿಎನ್‌ಎಸ್ ಕಾಯ್ದೆಯಡಿ 299, 192 ಕಾಯ್ದೆಯಡಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ 5 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ.