Home News Crime: ಕೇರಳದಿಂದ ನಿಷೇಧಿತ ಮದ್ಯ ಸಾಗಾಟ: ಮಾಲು ಸಮೇತ ಕೊಡಗಿನ ಇಬ್ಬರು ವಶಕ್ಕೆ

Crime: ಕೇರಳದಿಂದ ನಿಷೇಧಿತ ಮದ್ಯ ಸಾಗಾಟ: ಮಾಲು ಸಮೇತ ಕೊಡಗಿನ ಇಬ್ಬರು ವಶಕ್ಕೆ

Hindu neighbor gifts plot of land

Hindu neighbour gifts land to Muslim journalist

Crime: ಕೇರಳ ರಾಜ್ಯದಿಂದ ಅಕ್ರಮವಾಗಿ ನಿಷೇಧಿತ ಮದ್ಯ ಸಾಗಾಟ ಮಾಡುತ್ತಿದ್ದ ಕೊಡಗು ಜಿಲ್ಲೆಯ ಇಬ್ಬರನ್ನು ಮಾಲು ಸಮೇತ ಕೇರಳ ತಲಪುಳ ಪೊಲೀಸರು ವಶಕ್ಕೆ ಪಡೆಯಲಾಗಿದೆ.

ಕೇರಳದ ಪಾಚ್ಚುರಂನಿಂದ ಮಾನoದವಾಡಿ ಕಡೆಗೆ ತೆರಳುತ್ತಿದ್ದ ಕಾರನ್ನು ಕರ್ತವ್ಯ ನಿರತ ಪೊಲೀಸರು ಪರಿಶೀಲನೆ ನಡೆಸಿದ ವೇಳೆ 5 ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಕೇರಳದ ನಿಷೇಧಿತ ಮದ್ಯ (ಕಳ್ಳಬಟ್ಟಿ) ಪತ್ತೆಯಾಗಿದೆ. ಈ ಸಂಬಂಧ ತಲಪುಳ ಪೊಲೀಸರು ಪೊನ್ನoಪೇಟೆ ತಾಲ್ಲೂಕಿನ ಬಾಡರಕೇರಿ, ಪೋರಾಡು ಗ್ರಾಮದ ಬಿ.ಎ ಬಾನು ಹಾಗೂ ಬಿ. ಕೆ ಸಂಪತ್ ನ್ನು ವಶಕ್ಕೆ ಪಡೆದು ಕೇರಳ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನಿಷೇಧಿತ ಮದ್ಯದ ಸಾಗಾಟ ಎಂದರೆ ಕಾನೂನಿನಿಂದ ನಿಷೇಧಿಸಲಾದ ಮದ್ಯವನ್ನು ಅಕ್ರಮವಾಗಿ ಸಾಗಿಸುವುದು. ಇದನ್ನು ಸಾಮಾನ್ಯವಾಗಿ ಬೂಟ್‌ಲೆಗ್ಗಿಂಗ್ ಎಂದು ಕರೆಯಲಾಗುತ್ತದೆ. ಅಂದರೆ, ಮದ್ಯವನ್ನು ಉತ್ಪಾದಿಸುವುದು, ಮಾರಾಟ ಮಾಡುವುದು ಅಥವಾ ಸಾಗಿಸುವುದು ಕಾನೂನಿನಿಂದ ನಿಷೇಧಿಸಲ್ಪಟ್ಟಾಗ, ಅದನ್ನು ಬೂಟ್‌ಲೆಗ್ಗಿಂಗ್ ಎಂದು ಕರೆಯಲಾಗುತ್ತದೆ. ಇನ್ನು, ನಿಷೇಧಿತ ಮದ್ಯದ ಸಾಗಾಟವು ಕಾನೂನುಬಾಹಿರ ಚಟುವಟಿಕೆಯಾಗಿದೆ ಮತ್ತು ಇದನ್ನು ತಡೆಯಲು ಮತ್ತು ಶಿಕ್ಷಿಸಲು ಕಾನೂನುಗಳಿವೆ.