Home News Priyank Kharge: ಪ್ರಿಯಾಂಕ್‌ ಖರ್ಗೆ ಒಬ್ಬ ʼಪ್ರಥಮ ದರ್ಜೆ ಮೂರ್ಖʼ- ಅಸ್ಸಾಂ ಸಿಎಂ ಹಿಮಂತ ಬಿಸ್ವಾ

Priyank Kharge: ಪ್ರಿಯಾಂಕ್‌ ಖರ್ಗೆ ಒಬ್ಬ ʼಪ್ರಥಮ ದರ್ಜೆ ಮೂರ್ಖʼ- ಅಸ್ಸಾಂ ಸಿಎಂ ಹಿಮಂತ ಬಿಸ್ವಾ

Priyank Kharge iamge
Image source - Opindia

Hindu neighbor gifts plot of land

Hindu neighbour gifts land to Muslim journalist

Priyank Kharge: ಅಸ್ಸಾಂನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರತಿಭಾನ್ವಿತ ಮತ್ತು ಸಮರ್ಥ ಜನರ ಕೊರತೆ ಇದೆ ಎನ್ನುವ ವಿವಾದಾತ್ಮಕ ಹೇಳಿಕೆಗಾಗಿ ಕರ್ನಾಟಕ ಸಚಿವ ಮತ್ತು ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ಅವರ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

https://x.com/i/status/1982724103300956257

ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆಗೆ ಅಸ್ಸಾಂ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಸರಕಾರ ಮತ್ತು ಬಿಜೆಪಿ ಎರಡೂ ಇದನ್ನು ಅಸ್ಸಾಂನ ಜನರಿಗೆ, ವಿಶೇಷವಾಗಿ ಯುವಕರಿಗೆ ಗಂಭೀರ ಅವಮಾನ ಎಂದು ಕರೆದಿವೆ.

ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡನೆ ಮಾಡಿದ್ದು, ಅವರನ್ನು “ಮೊದಲ ದರ್ಜೆಯ ಮೂರ್ಖʼ ಎಂದು ಟೀಕಿಸಿದ್ದಾರೆ. ಅವರು ಅಸ್ಸಾಂ ಯುವಕರನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್‌ ಇನ್ನೂ ಇದನ್ನು ಖಂಡಿಸಿಲ್ಲ. ಅಸ್ಸಾಂನಲ್ಲಿ ವಿದ್ಯಾವಂತ ಯುವಕರಿಲ್ಲ ಎಂದು ಅವರು ಹೇಳಿರುವುದರಿಂದ ನಾವು ಅವರ ವಿರುದ್ಧ ಪ್ರಕರಣ ದಾಖಲಿಸಬಹುದು. ಇದು ಅಸ್ಸಾಂನ ಎಲ್ಲಾ ಯುವಕರಿಗೆ ಮಾಡಿದ ಅವಮಾನʼ ಎಂದು ಶರ್ಮಾ ಹೇಳಿದ್ದಾರೆ.