Home News Pruthvi Bhat: ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ ಪೃಥ್ವಿ ಭಟ್ –...

Pruthvi Bhat: ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ ಪೃಥ್ವಿ ಭಟ್ – ವಶೀಕರಣದ ಆರೋಪ!!

Hindu neighbor gifts plot of land

Hindu neighbour gifts land to Muslim journalist

Pruthvi Bhat: ಸರಿಗಮಪ ಖ್ಯಾತಿಯ ಪೃಥ್ವಿ ಭಟ್ಟವರು ಪೋಷಕರ ವಿರೋಧದ ನಡುವೆ ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದು, ವಶೀಕರಣದ ಆರೋಪವನ್ನು ಕೇಳಿಬಂದಿದೆ.

ಹೌದು, ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಜನಪ್ರಿಯತೆ ಪಡೆದಿರುವ ಕಾಸರಗೋಡಿನ ಪೃಥ್ವಿ ಭಟ್ ಇತ್ತೀಚಿಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ಗಾಯಕಿ ಪ್ರಥ್ವಿ ಭಟ್‌ ಕಳೆದ ಕೆಲವು ದಿನಗಳ ಹಿಂದೆ ಮನೆಯವರನ್ನು ವಿರೋಧಿಸಿ ಅಭಿಷೇಕ್‌ ಎನ್ನುವವರನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಇವನಲ್ಲೇ ಆಕೆಯ ಪೋಷಕರು ವಶೀಕರಣದ ಆರೋಪ ಮಾಡಿದ್ದು ಸರಿಗಮಪ ಜೂರಿ ನರಹರಿ ದೀಕ್ಷಿತ್ ಅವರು ಇದಕ್ಕೆ ಕಾರಣ ಎಂದಿದ್ದಾರೆ.

ಸಧ್ಯ ಪ್ರಥ್ವಿ ಭಟ್‌ ತಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಈಗ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಈ ಆಡಿಯೋದಲ್ಲಿ ಪೃಥ್ವಿ ಭಟ್ ತಂದೆ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.