Home News Mangalore: ಮಂಗಳೂರು: ಜೈಲಿನಲ್ಲಿ ಕೈದಿಗಳ ಹೊಡೆದಾಟ, ಓರ್ವನಿಗೆ ಗಾಯ: ನೌಷಾದ್‌ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ-ಪೊಲೀಸ್‌...

Mangalore: ಮಂಗಳೂರು: ಜೈಲಿನಲ್ಲಿ ಕೈದಿಗಳ ಹೊಡೆದಾಟ, ಓರ್ವನಿಗೆ ಗಾಯ: ನೌಷಾದ್‌ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ-ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್

Hindu neighbor gifts plot of land

Hindu neighbour gifts land to Muslim journalist

Mangalore: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ರಾತ್ರಿ ಸುಮಾರು 7 ಗಂಟೆಗೆ ನಡೆದ ವಿಚಾರಣಾಧೀಕ ಕೈದಿಗಳ ಹೊಡೆದಾಟದಲ್ಲಿ ಒಬ್ಬ ಕೈದಿ ಗಾಯಗೊಂಡಿದ್ದಾನೆ. ಈ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ವಾರಂಟೈನ್‌ ಸೆಲ್‌ ವಿಭಾಗದ ಕೆಲವು ವಿಚಾರಣಾ ಕೈದಿಗಳು ಕಚೇರಿ ಮುಂಭಾಗದಲ್ಲಿ ನಿಂತು ʼಬಿʼ ಬ್ಯಾರಕ್‌ನಲ್ಲಿರುವ ಕೈದಿಗಳನ್ನು ಗುರಾಯಿಸಿ ನೋಡಿದ್ದು, ಪರಸ್ಪರ ಅವಾಚ್ಯವಾಗಿ ಬೈದಾಡಿಕೊಂಡಿದ್ದರು. ಸಿಮೆಂಟ್‌ ಇಟ್ಟಿಗೆಯನ್ನು ಒಡೆದು ಅದರ ತುಂಡುಗಳನ್ನು ಎಸೆದಿದ್ದರು. ಇನ್ನೊಂದು ಬ್ಯಾರಾಕ್‌ನ ಕೆಲ ಕೈದಿಗಳು ಮಧ್ಯದ ಗೇಟನ್ನು ದೂಡಿ ಹೊರಬಂದು ಕಚೇರಿಯ ನ್ಯಾಯಾಂಗ ವಿಭಾಗದ ಕೋಣೆಯತ್ತ ನುಗ್ಗಿದ್ದು, ಅದರ ಬಾಗಿಲಿನ ಗಾಜನ್ನು ಒಡೆದು ಹಾಕಿದರು. ಈ ಗಲಾಟೆಯಲ್ಲಿ ಕೈದಿಯೋರ್ವನ ಕಾಲಿಗೆ ಗಾಯವಾಗಿದೆ ಎಂದು ಜೈಲು ಅಧಿಕ್ಷಕರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲಿನಲ್ಲಿ ಕೈದಿಗಳು ಹೊಡೆದಾಡುವ ದೃಶ್ಯವನ್ನು ಸಮೀಪದ ಕಟ್ಟಡವೊಂದರ ಮಹಡಿಯಲ್ಲಿದ್ದವರು ಚಿತ್ರೀಕರಣ ಮಾಡಿದ್ದು, ಹಿಂದೂಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯಲ್ಲಿ ಬಂಧನಕ್ಕೊಳಗಾದ ಆರೋಪಿ ನೌಷಾದ್‌ ಗುರಿಯಾಗಿಸಿ ಹಲ್ಲೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಆರೋಪಿ ನೌಷಾದ್‌ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಸ್ಪಷ್ಟಪಡಿಸಿದ್ದಾರ ಎಂದು ವರದಿಯಾಗಿದೆ.