Home News Mallikarjun Kharge: ‘ಪೆಹಾಲ್ಗಾಂ ದಾಳಿ’ ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಗೊತ್ತಿತ್ತು – ಮಲ್ಲಿಕಾರ್ಜುನ್ ಖರ್ಗೆ...

Mallikarjun Kharge: ‘ಪೆಹಾಲ್ಗಾಂ ದಾಳಿ’ ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಗೊತ್ತಿತ್ತು – ಮಲ್ಲಿಕಾರ್ಜುನ್ ಖರ್ಗೆ ಬಾಂಬ್

Hindu neighbor gifts plot of land

Hindu neighbour gifts land to Muslim journalist

Mallikarjun Kharge: ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಪೆಹಾಲ್ಗಾಂ ದಾಳಿ’ ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಗೊತ್ತಿತ್ತು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಪೂರ್ಣಗೊಂಡ ಕಾರಣ ಸಮರ್ಪಣಾ ಸಮಾವೇಶದ ಹೆಸರಿನಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ಪಹಲ್ಗಾಮ್ ವಿಚಾರ ಪ್ರಸ್ತಾಪಿಸಿ, ಈ ಘಟನೆಗೆ ನೇರ ಕಾರಣ ಕೇಂದ್ರ ಸರ್ಕಾರ ಎಂದು ಆರೋಪಿಸಿದ್ರು. ಪಹಲ್ಗಾಮ್ ನಲ್ಲಿ ಮೋದಿ ಸರ್ಕಾರ ಭದ್ರತೆ ಕೊಟ್ಟಿಲ್ಲ ಹೀಗಾಗಿ ಅಲ್ಲಿ ಜನರ ಕೊಲೆಯಾಯ್ತು. ಸರ್ಕಾರ, ಮಿಲಿಟರಿ ಯಾರೂ ಜನರಿಗೆ ಸಹಕಾರ ಕೊಟ್ಟಿಲ್ಲ. ಆದ್ರೂ ಮೋದಿ ಒಂದು ಮಾತು ಹೇಳಲಿಲ್ಲ. 17ನೇ ತಾರೀಖು ಮೋದಿ ಕಾಶ್ಮೀರಕ್ಕೆ ಹೋಗುವವರಿದ್ರು. ಆದ್ರೆ ಬೇಹುಗಾರಿಕೆ, ಇಂಟಲಿಜೆನ್ಸ್‌ ಅವರು ಹೋಗಬೇಡಿ ಎಂದ್ರು ಕ್ಯಾನ್ಸಲ್ ಮಾಡಿಸಿದ್ರು. ಹಾಗಾದ್ರೆ ಇದೆಲ್ಲಾ ಮೋದಿಗೆ ಗೊತ್ತಿತ್ತು ಅಲ್ಲವೇ? ಹಾಗಿದ್ರೂ ಮೋದಿ ಯಾಕೆ ಹೇಳಲಿಲ್ಲ ಎಂದು ಕಿಡಿಕಾರಿದರು.