Home News Udupi: ಪೋಡಿ ಮಾಡದ ಜಮೀನು ಇನ್ನು ಸರ್ಕಾರದ ವಶಕ್ಕೆ?!

Udupi: ಪೋಡಿ ಮಾಡದ ಜಮೀನು ಇನ್ನು ಸರ್ಕಾರದ ವಶಕ್ಕೆ?!

Hindu neighbor gifts plot of land

Hindu neighbour gifts land to Muslim journalist

Udupi: ಪೋಡಿ ಮಾಡದ ಬಗರ್‌ಹುಕುಂ ಜಮೀನುಗಳನ್ನು ಸರಕಾರದ ವಶಕ್ಕೆ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಅಕ್ರಮ ಸಕ್ರಮದಲ್ಲಿ ಮಂಜೂರಾಗಿರುವ ಬಗರ್ ಹುಕುಂ ಜಮೀನುಗಳ ಪೋಡಿ ಮಾಡುವಂತೆ ರಾಜ್ಯ ಸರಕಾರ ನಿರ್ದೇಶನ ನೀಡಿದ್ದು, ಅದರಂತೆ ಪೋಡಿ ಆಂದೋಲನದ ಮೂಲಕ ಸರ್ವೆ ಇಲಾಖೆಯಿಂದ ಸರ್ವೆ ಮಾಡಲಾಗುತ್ತಿದೆ. ಆದರೆ ಕೆಲವರು ಈ ಬಗ್ಗೆ ಸರ್ವೆ ಮಾಡಿಕೊಳ್ಳುತ್ತಿಲ್ಲ ಮತ್ತು ಸಹಕಾರ ಕೂಡ ನೀಡುತ್ತಿಲ್ಲ. ಹೀಗಾಗಿ ಓಡಿ ಮಾಡದ ಬಗರು ಹುಕುಂ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ ಮಂಜೂರಾದ ಜಮೀನು ಬಳಕೆ ಮಾಡದಿದ್ದಲ್ಲಿ, ಪೋಡಿಗೆ ಸಹಕಾರ ನೀಡದಿದ್ದಲ್ಲಿ ಅಂತಹ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗುತ್ತದೆ. ಹೀಗಾಗಿ ಸಾಗುವಳಿದಾರರು ಸರ್ವೇ ಇಲಾಖೆಯೊಂದಿಗೆ ಕೈಜೋಡಿಸಿ ಸರ್ವೆ ಆಂದೋಲನದ ವೇಳೆ ಸರ್ವೆ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.