Home News B S Yediyurappa: ಅಪ್ರಾಪ್ತೆ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ; ಬಿಎಸ್‌ವೈಗೆ ಬಿಗ್‌ ರಿಲೀಫ್‌

B S Yediyurappa: ಅಪ್ರಾಪ್ತೆ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ; ಬಿಎಸ್‌ವೈಗೆ ಬಿಗ್‌ ರಿಲೀಫ್‌

BS Yediyurappa

Hindu neighbor gifts plot of land

Hindu neighbour gifts land to Muslim journalist

B S Yediyurappa: ಅಪ್ರಾಪ್ತೆ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ಕರ್ನಾಟಕ ಹೈಕೋರ್ಟ್‌ ಧಾರವಾಡ ಪೀಠದಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿದ್ದರು.

ತನ್ನ ಅಪ್ರಾಪ್ತ ಮಗಳನ್ನು ಕೋಣೆಯೊಳಗೆ ಕರೆದುಕೊಂಡು ಹೋಗಿ ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ದೂರುದಾರೆ ದೂರು ನೀಡಿದ್ದಾರೆ. ಪರಿಚಾರಕರು, ಅಂಗರಕ್ಷಕರು, ಅಡುಗೆ ಸಹಾಯಕರು ಭೇಟಿ ಮಾಡಲು ಬಂದವರು ಸೇರಿ ಅನೇಕರು ಅರ್ಜಿದಾರರ ಸುತ್ತಮುತ್ತನೇ ಇದ್ದರು. ಮೇಲಾಗಿ ಅವರಿಗೆ 82 ವರ್ಷ. ಫ್ಯಾನ್‌, ಲೈಟ್‌ ಸ್ವಿಚ್‌ ಒತ್ತಕ್ಕೂ ಆಗುವುದಿಲ್ಲ. ಹೀಗಿರುವಾಗ ಸಂತ್ರಸ್ತೆಯನ್ನು ಕೋಣೆಗೆ ಕರೆದುಕೊಂಡು ಹೋಗಿ ಅಸಭ್ಯ ವರ್ತನೆ ಮಾಡಲು ಹೇಗೆ ಸಾಧ್ಯ? ಸಂತ್ರಸ್ತೆಯ ತಾಯಿ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು.

ಇಷ್ಟು ಮಾತ್ರವಲ್ಲದೇ, ದೂರುದಾರೆ ಅವರಿಗೆ ದೂರು ನೀಡುವುದು ಒಂದು ಹವ್ಯಾಸವಾಗಿತ್ತು. ಈಕೆ ತನ್ನ ಗಂಡ, ಮಗನ ವಿರುದ್ಧ, ರಾಜಕಾರಣಿಗಳು, ಐಪಿಎಸ್‌ ಅಧಿಕಾರಿಗಳ ವಿರುದ್ಧ ದೂರನ್ನು ಕೊಟ್ಟಿದ್ದಾರೆ. ಯಡಿಯೂರಪ್ಪ ವಿರುದ್ಧ ಸಂಗ್ರಹಿಸಿದೆ ಎನ್ನಲಾಗಿರುವ ಸಾಕ್ಷ್ಯ ವಿಶ್ವಸಾರ್ಹವಾಗಿದೆಯೇ ಇಲ್ಲವೇ ಎಂಬುವುದನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.