Home News Abhinandan Varthaman: ವಿಂಗ್ ಕಮಾಂಡರ್ ಅಭಿನಂದನ್‌ ವರ್ಧಮಾನರನ್ನು ಸೆರೆಹಿಡಿದ ಪಾಕಿಸ್ತಾನಿ ಅಧಿಕಾರಿ ಹತ್ಯೆ

Abhinandan Varthaman: ವಿಂಗ್ ಕಮಾಂಡರ್ ಅಭಿನಂದನ್‌ ವರ್ಧಮಾನರನ್ನು ಸೆರೆಹಿಡಿದ ಪಾಕಿಸ್ತಾನಿ ಅಧಿಕಾರಿ ಹತ್ಯೆ

Hindu neighbor gifts plot of land

Hindu neighbour gifts land to Muslim journalist

Abhinandan Varthaman: 2019 ರಲ್ಲಿ ಬಾಲಕೋಟ್ ದಾಳಿಯ ಸಮಯದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆಹಿಡಿದಿದ್ದ ಪಾಕಿಸ್ತಾನಿ ಅಧಿಕಾರ ಮೇಜರ್‌ ಮೊಯಿಜ್‌ ಅಬ್ಬಾಸ್‌ ಶಾ ಗುಂಡಿಗೆ ಬಲಿಯಾಗಿದ್ದಾರೆ.

ಪಾಕಿಸ್ತಾನದ ದಕ್ಷಿಣ ವಜೀರಿಸ್ತಾನದ ಸರ್ಗೋಧಾದಲ್ಲಿ ತೆಹ್ರೀಕ್-ಎ-ತಾಲಿಬಾನ್-ಪಾಕಿಸ್ತಾನ (ಟಿಟಿಪಿ) ನಡೆಸಿದ ದಾಳಿಯಲ್ಲಿ ಮೇಜರ್ ಮೊಯಿಜ್ ಅಬ್ಬಾಸ್ ಶಾ ಎಂಬ ಪಾಕಿಸ್ತಾನಿ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಕೂಡ ಈ ಬಗ್ಗೆ ಹೇಳಿಕೆ ನೀಡಿದೆ. ಈ ದಾಳಿಯಲ್ಲಿ ಮೇಜರ್ ಮೊಯಿಜ್ ಅಬ್ಬಾಸ್ ಶಾ ಮತ್ತು ಲ್ಯಾನ್ಸ್ ನಾಯಕ್ ಜಿಬ್ರಾನ್ ಸಾವನ್ನಪ್ಪಿದ್ದಾರೆ.

ದಕ್ಷಿಣ ವಜೀರಿಸ್ತಾನ ಜಿಲ್ಲೆಯಲ್ಲಿ ನಡೆದಿರುವ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 11 ಭಾರತೀಯ ಪ್ರಾಯೋಜಿತ ಭಯೋತ್ಪಾದಕರನ್ನು ಕೊಂದರೆ, ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರ ಎಂದು ಪಾಕಿಸ್ತಾನಿ ಸೇಮೆ ಜೂನ್‌ 24 ರ ಹೇಳಿಕೆಯಲ್ಲಿ ತಿಳಿಸಿದೆ.

ತೆಹ್ರೀಕ್-ಎ-ತಾಲಿಬಾನ್-ಪಾಕಿಸ್ತಾನ ಪಾಕಿಸ್ತಾನಿ ಸೈನಿಕರನ್ನು ಕೊಂದಿದ್ದು ಇದೇ ಮೊದಲಲ್ಲ. ಪ್ರತಿ ದಿನವೂ ಟಿಟಿಪಿ ತನ್ನದೇ ಆದ ರೀತಿಯಲ್ಲಿ ದಾಳಿ ಮಾಡುವ ಮೂಲಕ ಇಂತಹ ಘಟನೆಗಳನ್ನು ನಡೆಸುತ್ತಿದೆ. ಟಿಟಿಪಿ ಭಯೋತ್ಪಾದಕರು ಪಾಕಿಸ್ತಾನವನ್ನು ವಶಪಡಿಸಿಕೊಂಡು ಅಲ್ಲಿ ತಾಲಿಬಾನ್ ಶೈಲಿಯ ಶರಿಯಾ ಕಾನೂನನ್ನು ಜಾರಿಗೆ ತರಲು ಬಯಸುತ್ತದೆ.

ಇದನ್ನೂ ಓದಿ:Health tips: ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ? ನೀವು ಒಂದ್ಸಲ ಟ್ರೈ ಮಾಡಿ ನೋಡಿ