Home News Missing Case: ಪಡುಬಿದ್ರೆ: ಗೃಹಿಣಿ ನಾಪತ್ತೆ!

Missing Case: ಪಡುಬಿದ್ರೆ: ಗೃಹಿಣಿ ನಾಪತ್ತೆ!

Hindu neighbor gifts plot of land

Hindu neighbour gifts land to Muslim journalist

Missing Case: ಪಡುಬಿದ್ರೆಯ ಉಚ್ಚಿಲ ಬಡಾ ಗ್ರಾಮದ ಅಬ್ದುಲ್‌ ಅಜೀಜ್‌ ಅವರನ್ನು ವಿವಾಹವಾಗಿದ್ದ ಅಯಿಷಾ (33) ಅವರು ನ. 26ರಿಂದ ಮನೆ ಬಿಟ್ಟು ಹೋದವರು ಮರಳಿ ಮನಗೆ ಬಾರದೆ ನಾಪತ್ತೆಯಾಗಿರುವುದಾಗಿ (Missing Case) ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಯಿಷಾ ಅವರು ತನ್ನ ಮಗ ಹಾಗೂ ಗಂಡನೊಂದಿಗೆ ಗಲ್ಫ್ ರಾಷ್ಟ್ರದಲ್ಲಿದ್ದು, ಕಳೆದ 6 ತಿಂಗಳಿನಿಂದ ಅವರು ಬಡಾ ಗ್ರಾಮದಲ್ಲಿದ್ದರು. ತಾಯಿಯನ್ನು ಕರೆದುಕೊಂಡು ಅಬ್ದುಲ್‌ ಅಜೀಜ್‌ ಅವರು ನ. 26ರಂದು ಮಣಿಪಾಲದ ಆಸ್ಪತ್ರೆಗೆ ಹೋಗಿ ಮರಳಿ ಬರುವ ವೇಳೆ ಅಯಿಷಾ ಮನೆಯಲ್ಲಿ ಇರಲಿಲ್ಲ.

ಅಯಿಷಾ ಬಿಳಿ ಮೈಬಣ್ಣ ಹೊಂದಿದ್ದು, ಮುಖದಲ್ಲೊಂದು ಮಚ್ಚೆಯಿದೆ. ಕನ್ನಡಕವನ್ನು ಧರಿಸುತ್ತಾರೆ. 5.2 ಅಡಿ ಎತ್ತರವಿದ್ದು, ಬುರ್ಖಾ ಧರಿಸಿದ್ದ ಅವರು ಮರಾಠಿ, ಹಿಂದಿ, ಇಂಗ್ಲಿಷ್‌ ಹಾಗೂ ಬ್ಯಾರಿ ಭಾಷೆಯನ್ನು ಮಾತಾಡುತ್ತಾರೆ. ಈಕೆ ಬಗ್ಗೆ ಯಾರಿಗಾದರೂ ಸುಳಿವು ಲಭಿಸಿದ್ದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆ(0820 2555452)ಯನ್ನು ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.