Home News Party: ಭರ್ಜರಿ ಬಾಡೂಟಕ್ಕೆ ಬ್ರೇಕ್: ಊಟ ವಶಪಡಿಸಿಕೊಂಡ ಅಧಿಕಾರಿಗಳು ಏನ್ ಮಾಡಿದ್ರು?

Party: ಭರ್ಜರಿ ಬಾಡೂಟಕ್ಕೆ ಬ್ರೇಕ್: ಊಟ ವಶಪಡಿಸಿಕೊಂಡ ಅಧಿಕಾರಿಗಳು ಏನ್ ಮಾಡಿದ್ರು?

Hindu neighbor gifts plot of land

Hindu neighbour gifts land to Muslim journalist

Party: ಚುನಾವಣೆ(Election) ಅಂದ ಕೂಡಲೆ ಮತದಾರರಿಗೆ ಭರ್ಜರಿ ಬಾಡೂಟ ಹಾಕೋದನ್ನು ಅಭ್ಯರ್ಥಿಗಳು ಮರೆಯೋದಿಲ್ಲ. ಹಾಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್(C P Yogeshwar) ಅವರು ನಗರದ ಹೊರ ವಲಯದ ಖಾಸಗಿ ಬೆಂಬಲಿಗರ ಉಣಬಡಿಸಲು ರೆಸಾರ್ಟ್‌ನಲ್ಲಿ(Resort) ಸಭೆಯಲ್ಲಿ ತಯಾರು ಮಾಡಿಸಿದ್ದ ಬಾಡೂಟವನ್ನು ಚುನಾವಣಾ ತಂಡ ಅಧಿಕಾರಿಗಳ(Election officers) ವಶಪಡಿಸಿಕೊಂಡು, ಪ್ರಕರಣವನ್ನು ದಾಖಲಿಸಿದೆ.

ಯೋಗೇಶ್ವರ್ ಅವರು ತಮ್ಮ ಮುಂದಿನ ನಡೆ ನಿರ್ಧಾರಕ್ಕಾಗಿ ಉಪ ಚುನಾವಣೆ ಘೋಷಣೆಗೂ ಮುನ್ನವೇ ಕೂಡೂರು ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ಬಿಜೆಪಿ ಬ್ಯಾನರ್‌ನಡಿ ಸಭೆ ನಿಗದಿಪಡಿಸಿಕೊಂಡು, ಅದಕ್ಕಾಗಿ ಭರ್ಜರಿ ಬಾಡೂಟವನ್ನು ಸಿದ್ಧಮಾಡಿಸಿದ್ದರು. ಅಧಿಕಾರಿಗಳು
ಊಟವನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಪಾಲ್ಗೊಂಡವರು ವಾಪಸ್ಸಾಗಿದ್ದಾರೆ.

ಹಾಗೆಯೇ ಸಭೆಯಲ್ಲಿ 2 ಸಾವಿರದಷ್ಟು ಮಂದಿಗೆ ಮಟನ್ ಮತ್ತು ಚಿಕನ್ ಊಟವನ್ನು ರೆಸಾರ್ಟ್‌ನಲ್ಲಿ ತಯಾರಿಸಿ ಕೊಳ್ಳಲಾಗಿತ್ತು. ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಯು ಊಟವನ್ನು ವಶಕ್ಕೆ ಪಡೆದು, ಔತಣಕೂಟಕ್ಕೆ ಬ್ರೇಕ್ ಹಾಕಿದರು. ಊಟ ತಯಾರಿಸಲು ಬಳಸಿದ್ದ ಪಾತ್ರೆಗಳೂ ಕೂಡಾ ಸೀಜ್ ಆಗಿವೆ. ವಶಪಡಿಸಿಕೊಂಡ ಆಹಾರ ಪದಾರ್ಥವನ್ನು ನಾಶಪಡಿಸಲಾಗಿದೆ ಎಂದು ಹೇಳಲಾಗಿದೆ.