Home News Government: ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು ಮತ್ತು ಪಾನೀಯಗಳನ್ನು...

Government: ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು ಮತ್ತು ಪಾನೀಯಗಳನ್ನು ಬಳಸುವಂತೆ ಆದೇಶ!

Hindu neighbor gifts plot of land

Hindu neighbour gifts land to Muslim journalist

Government: ರಾಜ್ಯ ಸರ್ಕಾರವು (Government) ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು ಮತ್ತು ಪಾನೀಯಗಳನ್ನು ಬಳಸುವಂತೆ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರವು ಸಾಂಪ್ರದಾಯಿಕ ಮತ್ತು ಸಾವಯವ ಸಿರಿಧಾನ್ಯಗಳನ್ನು ಪ್ರಜ್ಞಾವಂತರ ಆಹಾರವನ್ನ ಉತ್ತೇಜಿಸುತ್ತಿದ್ದು ಈಗಾಗಲೇ ಬಳಸಬಹುದಾದ ತಿಂಡಿ ತಿನಿಸುಗಳ ಪಟ್ಟಿಯನ್ನೂ ನೀಡಿದೆ. ರೈತಸಿರಿ ಯೋಜನೆಯಡಿ ಬೆಳೆ ಸಮೀಕ್ಷೆ ಆಧರಿಸಿ ಸಿರಿಧಾನ್ಯ ಬೆಳೆಸಿದ ರೈತರಿಗೆ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂಗಳಂತೆ ಗರಿಷ್ಟ ಎರಡು ಹೆಕ್ಟೇ‌ರ್ ವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ.

ಬಳಸಬಹುದಾದ ತಿಂಡಿ ತಿನಿಸುಗಳ ಪಟ್ಟಿ:
ಮಸಾಲ ಕುರುಕಲು ತಿಂಡಿ, ಸಿರಿಧಾನ್ಯಗಳ ಕುಕೀಸ್, ಸಿರಿಧಾನ್ಯಗಳ ಕ್ರಂಚ್ ಬಾ‌ರ್, ಸಿರಿಧಾನ್ಯಗಳ ಸಿಹಿತಿನಿಸು, ರಾಗಿ-ಬೆಲ್ಲದ ಬಿಸ್ಕತ್ತು, ಸಿರಿಧಾನ್ಯಗಳ ಪಫ್‌, ಕುರುಕಲು ಮಿಕ್ಷ್ಮರ್, ಸಿರಿಧಾನ್ಯಗಳ ಮೊಳಕೆ ಬಳಸಿದ ಬಿಸ್ಕತ್ತು, ರಿಬ್ಬನ್ ಪಕೋಡ, ಬೂಂದಿ, ಜೋಳದ ಪಾಪ್ಸ್, ಎನರ್ಜಿ ಬಾರ್, ಕೋಡುಬಳೆ ಹಾಗೂ ಮುರುಕು.