Home News BBK 12: ಜಾಲಿವುಡ್‌ ಸ್ಟುಡಿಯೋಸ್‌ ಬೀಗ ಹಾಕಿದ ಅಧಿಕಾರಿಗಳು, ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಸ್ಥಗಿತ?

BBK 12: ಜಾಲಿವುಡ್‌ ಸ್ಟುಡಿಯೋಸ್‌ ಬೀಗ ಹಾಕಿದ ಅಧಿಕಾರಿಗಳು, ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಸ್ಥಗಿತ?

Hindu neighbor gifts plot of land

Hindu neighbour gifts land to Muslim journalist

BBK 12: ಕನ್ನಡ ಬಿಗ್‌ಬಾಸ್‌ ಸೀಜನ್-‌12 ರಿಯಾಲಿಟಿ ಶೋ ಗೆ ಒಂದು ವಾರದಲ್ಲಿಯೇ ಸಂಕಷ್ಟ ಪ್ರಾರಂಭವಾಗಿದೆ. ಜಾಲಿವುಡ್‌ ಸ್ಟುಡಿಯೋಗೆ ಬೀಗ ಮುದ್ರೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.

ರಾಮನಗರದ ಬಿಡದಿ ಬಳಿಯ 35 ಎಕರೆ ಪ್ರದೇಶದಲ್ಲಿರುವ ಜಾಲಿವುಡ್‌ ಸ್ಟುಡಿಯೋದಲ್ಲಿ ಪ್ರತ್ಯೇಕ ಸೆಟ್‌ಗಳನ್ನು ಹಾಕಿ ಕನ್ನಡ ಬಿಗ್‌ ಬಾಸ್‌ 12 ನಡೆಸಲಾಗುತ್ತಿದೆ. ಸೆಟ್‌ಗಳಲ್ಲಿ ಮಾಲಿನ್ಯ ನಿಯಂತ್ರಣದ ನಿಯಮ ಉಲ್ಲಂಘನೆ ಮಾಡಿದ್ದಾಗಿ, ಜಾಲಿವುಡ್‌ ಸ್ಟುಡಿಯೋ ಕೂಡಾ ನಿಯಮ ಉಲ್ಲಂಘನೆ ಮಾಡಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ಜಾರಿ ಮಾಡಿದೆ.

ಬಿಗ್‌ಬಾಸ್‌ ಶೋ ನಡೆಸಲು ಪೊಲೀಸರಿಂದ ಕೂಡಾ ಅನುಮತಿ ಪಡೆಯದ ಕಾರಣ, ಶೋ ಸ್ಥಗಿತ ಮಾಡಲು ಜಾಲಿವುಡ್‌ ಸ್ಟುಡಿಯೋ ಸ್ಥಳಕ್ಕೆ ತೆರಳಿದಾಗ ಜಾಲಿವುಡ್‌ ಸ್ಟುಡಿಯೋಸ್‌ ಆಗಲಿ, ಬಿಗ್‌ಬಾಸ್‌ ಶೋ ಟೀಂ ಆಗಲಿ ನೋಡಿಸ್‌ ತೆಗೆದುಕೊಳ್ಳಲು ಹಿಂದೇಟು ಹಾಕಿದೆ.

ಬಿಡದಿ ತಹಶೀಲ್ದಾರ್‌, ಪೊಲೀಸ್‌ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಜಾಲಿವುಡ್‌ ಸ್ಟುಡಿಯೋಸ್‌ ಹಾಗೂ ಬಿಗ್‌ ಬಾಸ್‌ ಶೋ ನಡೆಯುತ್ತಿರುವ ಸ್ಥಳಕ್ಕೆ ದೌಡಾಯಿಸಿದ್ದು, ಬಿಗ್‌ ಬಾಸ್‌ ಕಾರ್ಯಕ್ರಮ ಹಾಗೂ ಜಾಲಿವುಡ್‌ ಸ್ಟುಡಿಯೋಗೆ ಬೀಗ ಮುದ್ರೆ ಹಾಕಲು ಮುಂದಾಗಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಅಧಿಕಾರಿಗಳು ಜಾಲಿವುಡ್‌ ಸ್ಟುಡಿಯೋಸ್‌ ಆಂಡ್‌ ಎಂಟರ್‌ಟೈನ್‌ಮೆಂಟ್‌ ಪ್ರವೈಟ್‌ ಲಿಮಿಟೆಡ್‌ ಕಂಪನಿಗೆ ಬೀಗ ಹಾಕಿದ್ದಾರೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ ಇದೆ. ರಾಮನಗರ ತಹಶೀಲ್ದಾರ್‌ ಹಾಗೂ ಪೊಲೀಸರ ಸಮ್ಮುಖದಲ್ಲಿ ಬೀಗ ಹಾಕಲಾಗಿದೆ.