Home News Drug plant: ಅರಣ್ಯದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಖದೀಮರು – 36 ಹಸಿ ಗಾಂಜಾ ಗಿಡ...

Drug plant: ಅರಣ್ಯದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಖದೀಮರು – 36 ಹಸಿ ಗಾಂಜಾ ಗಿಡ ವಶ

Hindu neighbor gifts plot of land

Hindu neighbour gifts land to Muslim journalist

Drug plant: ಚಾಮರಾಜನಗರದ ಹನೂರು ತಾಲೂಕಿನ ಬೂದಿಪಡಗ ಗ್ರಾಮದ ಕೌಳಿಹಳ್ಳ ಡ್ಯಾಮ್ ಸಮೀಪದ ಅರಣ್ಯದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗಾಂಜಾ ಗಿಡಗಳನ್ನು ಅಬಕಾರಿ ನಿರೀಕ್ಷಕ ದಯಾನಂದ್ ನೇತೃತ್ವದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಬೂದಿಪಡಗ ಗ್ರಾಮದ ಸಮೀಪ ಗಸ್ತು ಕಾರ್ಯ ನಡೆಸುತ್ತಿದ್ದಾಗ ಕೌಳಿ ಹಳ್ಳ ಕಟ್ಟೆ ಡ್ಯಾಮ್ ಹತ್ತಿರದ ಅರಣ್ಯದಲ್ಲಿ ಗಾಂಜಾ ಗಿಡ ಬೆಳಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧೀಕ್ಷಕ ವಿವೇಕ್ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಅಬಕಾರಿ ನಿರೀಕ್ಷಕ ದಯಾನಂದ್ ನೇತೃತ್ವದಲ್ಲಿ ಬಿ ಆರ್ ಟಿ ಹುಲಿ ಸಂರಕ್ಷಿತ ಅರಣ್ಯ ವಲಯ ವ್ಯಾಪ್ತಿಗೆ ಸೇರಿದ ಹೊನ್ನೆ ಬಾರೆ ಬೆಟ್ಟದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ ಹಸಿ ಗಾಂಜಾ ಗಿಡಗಳು ಬೆಳೆದಿರುವುದು ಪತ್ತೆಯಾಗಿದೆ. ತದನಂತರ 36 ಹಸಿಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: Jack Dorsey: ಇಂಟರ್ನೆಟ್, ವೈಫೈ ಇಲ್ಲದೆ ಬಳಸೋ ಹೊಸ ಮೆಸೆಂಜರ್ App ಕಂಡುಹಿಡಿದ ಟ್ವಿಟ್ಟರ್ ಸ್ಥಾಪಕ – ಡೌನ್ಲೋಡ್ ಮಾಡುವುದು ಹೇಗೆ?