Home News DK Shivkumar : ಡಿಕೆಶಿ ಮನೆಗೆ ಜಾತಿ ಗಣತಿಗಾಗಿ ಬಂದ ಅಧಿಕಾರಿಗಳು – ಪ್ರಶ್ನೆಗಳನ್ನು ಕೇಳಿ...

DK Shivkumar : ಡಿಕೆಶಿ ಮನೆಗೆ ಜಾತಿ ಗಣತಿಗಾಗಿ ಬಂದ ಅಧಿಕಾರಿಗಳು – ಪ್ರಶ್ನೆಗಳನ್ನು ಕೇಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಿಸಿಎಂ!!

Hindu neighbor gifts plot of land

Hindu neighbour gifts land to Muslim journalist

D K Shivkumar : ಭಾರೀ ವಿರೋಧದ ನಡುವೆ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಯುತ್ತಿದೆ. ಶಾಲಾ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತರು ತಮಗೆ ಬಯಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಅಪ್ಲೋಡ್ ಮಾಡುತ್ತಿದ್ದಾರೆ. ಅಂತೆಯೇ ಇದೀಗ ಬೆಂಗಳೂರಿನಲ್ಲಿರುವ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮನೆಗೆ ಜಾತಿಗಣತಿ ನಡೆಸುತ್ತಿರುವ ಅಧಿಕಾರಿಗಳು ಭೇಟಿ ಕೊಟ್ಟಿದ್ದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್, ಅವರು ಕೇಳಿದ ಪ್ರಶ್ನೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೌದು, ಜಾತಿ ಗಣತಿ ಸಮೀಕ್ಷೆಯ ಪ್ರಶ್ನಾವಳಿಯ ದೀರ್ಘತೆಯಿಂದಾಗಿ, ಒಂದು ಮನೆಯ ಸಮೀಕ್ಷೆಗೆ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಡಿಕೆ ಶಿವಕುಮಾರ್‌ ಅವರ ಮನೆಯಲ್ಲಿಯೇ ಸಮೀಕ್ಷೆಗೆ ಒಂದು ಗಂಟೆ ತೆಗೆದುಕೊಂಡಿತು ಎಂದು ಅವರು ತಿಳಿಸಿದ್ದಾರೆ. ‘ಹೀಗೆ ಸಮೀಕ್ಷೆ ಮಾಡ್ತಾ ಇದ್ರೆ ದಿನಕ್ಕೆ ಎಷ್ಟು ಜನರ ಸಮೀಕ್ಷೆ ಮಾಡ್ತೀರಾ? ಜನರು ಗಾಬರಿಯಾಗಿ ಮಾಹಿತಿ ಕೊಡದೇ ‘ನಡೀರಿ’ ಅಂತಾರೆ ಎಂದು ಡಿಕೆಶಿ ಆಕ್ಷೇಪಿಸಿದ್ದಾರೆ. ಸಮೀಕ್ಷಾದಾರರಿಗೆ ದಿನಕ್ಕೆ 20 ಮನೆಗಳ ಟಾರ್ಗೆಟ್ ನೀಡಲಾಗಿದೆ ಎಂದು ಅಧಿಕಾರಿ ರಾಜೇಂದ್ರ ಚೋಳನ್ ತಿಳಿಸಿದ್ದಾರೆ. ಅಲ್ಲದೆ ಕುರಿ, ಕೋಳಿ, ಟ್ರಾಕ್ಟರ್, ಕೇಸ್, ಕಾಯಿಲೆಯಂತಹ ಪ್ರಶ್ನೆಗಳು ಬೇಡ. ಆರ್ಥಿಕ-ಸಾಮಾಜಿಕ ಮಾಹಿತಿ ತಗೊಂಡ್ರೆ ಸಾಕು. ಸಿಂಪಲ್ ಆಗಿ ಸಮೀಕ್ಷೆ ಮಾಡಿ’ ಎಂದು ಡಿಕೆಶಿ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ:Gold price : ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ!!

ಸಮೀಕ್ಷೇಯಲ್ಲಿ ಡಿಕೆ ಶಿವಕುಮಾರ್‌ಗೆ ಕೇಳಲಾದ ಪ್ರಶ್ನೆಗಳು ಯಾವು ಯಾವು..?
ವೈಯಕ್ತಿಕ ವಿವರ:
ಶಿಕ್ಷಣ: M.com
ಜಾತಿ: ಒಕ್ಕಲಿಗ
ಉಪ ಜಾತಿ: ಗೌಡ ಒಕ್ಕಲಿಗ
ವೈವಾಹಿಕ ಸ್ಥಿತಿ: ಉಷಾ ಶಿವಕುಮಾರ್
ಮದುವೆ ವಯಸ್ಸು: 30
ಸರ್ಕಾರದಲ್ಲಿ ಉದ್ಯೋಗ: ಏನೂ ಇಲ್ಲ
ವಸತಿ ಶಾಲಾ ಸೌಲಭ್ಯ: ಇಲ್ಲ
ಮೀಸಲಾತಿ ಸೌಲಭ್ಯ: ಇಲ್ಲ
ಹಾಲಿ ಕೆಲಸ: ಪಬ್ಲಿಕ್ ಸರ್ವೆಂಟ್, ಸೆಲ್ಫ್ ಎಂಪ್ಲಾಯ್
ಮೂಲ ಕೆಲಸ: ಕೃಷಿ ಸಂಗೋಪನೆ
ಕುಲ ಕಸುಬಿನಿಂದ ಬಂದ ಕಾಯಿಲೆ: ಇಲ್ಲ
ಆದಾಯ: 12 ಲಕ್ಷಕ್ಕೂ ಹೆಚ್ಚು
ತೆರಿಗೆ ಪಾವತಿ: ಹೌದು
ನಿಗಮ ಮಂಡಳಿ ಸದಸ್ಯತ್ವ: ಇದೆ
ಜಮೀನು: 50 ಎಕರೆ, ಪಿತ್ರಾರ್ಜಿತ ಜಮೀನು
ಲೋನ್: ಇಲ್ಲ , ಬ್ಯುಸಿನೆಸ್ ಲೋನ್
ಜಾನುವಾರು: 29 ಹಸು
ಕುರಿ: 10 , ಹೈನುಗಾರಿಕೆ , ರೇಷ್ಮೆ ಸಾಕಾಣಿಕೆ, ಕೋಳಿ ಸಾಕಾಣಿಕೆ
ವಾಸದ ಮನೆ: 9
ವಾಣಿಜ್ಯ ಕಟ್ಟಡ: 4
ಫ್ಯಾಕ್ಟರಿ: 0
ಫಾರ್ಮ್ ಹೌಸ್: 2
ಖಾಲಿ ನಿವೇಷನ: 10
ಚರಾಸ್ತಿ: ಮೋಟರ್ ಸೈಕಲ್, ಕಾರು, ಎಸಿ, ಫ್ರಿಡ್ಜ್, ಟಿವಿ, ಲ್ಯಾಂಡ್ ಲೈನ್- 2
ಹನಿನೀರಾವರಿ: ಇದೆ
ಟ್ರಾಕ್ಟರ್: 3
ವಜ್ರಾಭರಣ: ‘ಇದು ಹೇಳಲು ಆಗಲ್ಲ’
ವಾಸದ ಮನೆ: ಪಕ್ಕಾ ಮನೆ
ಅಡುಗೆ ಇಂಧನ: ಎಲ್ ಪಿಜಿ
ಮನೆ: ಹೆಂಡತಿ ಮನೆ
ಕುಟುಂಬದಲ್ಲಿ ಅನಿವಾಸಿ ಭಾರತೀಯರು ಇದ್ದಾರಾ: ಇಲ್ಲ
ವ್ಯಾಜ್ಯ ಪ್ರಕರಣ: ಇದೆ