Home News Non Veg Row: ಸ್ಕೂಲ್ ಲಂಚ್‌ಬಾಕ್ಸ್‌ನಲ್ಲಿ ಇನ್ಮುಂದೆ ಮಾಂಸಾಹಾರಿ ಊಟ ತರುವಂತಿಲ್ಲ!

Non Veg Row: ಸ್ಕೂಲ್ ಲಂಚ್‌ಬಾಕ್ಸ್‌ನಲ್ಲಿ ಇನ್ಮುಂದೆ ಮಾಂಸಾಹಾರಿ ಊಟ ತರುವಂತಿಲ್ಲ!

Non Veg Row

Hindu neighbor gifts plot of land

Hindu neighbour gifts land to Muslim journalist

Non Veg Row: ಇನ್ನು ಮುಂದೆ ಮಧ್ಯಾಹ್ನದ ಲಂಚ್‌ಬಾಕ್ಸ್‌ನಲ್ಲಿ ಶಾಲಾ ಮಕ್ಕಳಿಗೆ ಪೋಷಕರು ಮಾಂಸಾಹಾರಿ ಉಪಹಾರ ನೀಡಿ ಕಳುಹಿಸಬಾರದು ಎಂದು ನೋಯ್ಡಾದ ಸೆಕ್ಟರ್ 132 ರಲ್ಲಿ ಇರುವ ಖಾಸಗಿ ಶಾಲೆಯಾದ ದೆಹಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ಆಡಳಿತ ಮಂಡಳಿ ಸುತ್ತೋಲೆ ಹೊರಡಿಸಿದ್ದು, ಶಾಲೆಯ ಈ ನಿರ್ಧಾರ ಇದೀಗ ಚರ್ಚೆಗೆ ಎಡೆಮಾಡಿದೆ.

ಆ ಸುತ್ತೋಲೆಯಲ್ಲಿ, ‘ವಿದ್ಯಾರ್ಥಿಗಳು ಮಾಂಸಾಹಾರಿ ಆಹಾರವನ್ನು ಶಾಲೆಗೆ ತರದಂತೆ ಗೌರವಯುತವಾಗಿ ವಿನಂತಿಸಲು ನಾವು ಈ ಪತ್ರವನ್ನು ಬರೆಯುತ್ತಿದ್ದೇವೆ’ ಎಂದು ಉಲ್ಲೇಖಿಸಲಾಗಿದ್ದು,  ಈ ವಿನಂತಿಗೆ ಎರಡು ಪ್ರಮುಖ ಕಾರಣಗಳನ್ನು ನೀಡಲಾಗಿದೆ. ‘ಆರೋಗ್ಯ ಮತ್ತು ಸುರಕ್ಷತೆ’ ನಿಟ್ಟಿನಲ್ಲಿ ಮಾಂಸಹಾರಿ ಊಟ ಊಟದ ಸಮಯಕ್ಕೆ ಕೆಡಬಹುದು. ಎರಡನೆಯ ಕಾರಣ, ಸಸ್ಯಾಹಾರಿ ಆಹಾರವು ಗೌರವಾನ್ವಿತ ಮತ್ತು ಆರಾಮದಾಯಕ ಭಾವನೆಯನ್ನು ಉಂಟುಮಾಡಲು ಸಹಾಯ ಮಾಡುತ್ತದೆ ಎಂದು ಸಲಹೆ ನೀಡಲಾಗಿದೆ.

ಆದರೆ, ಈ ಸುತ್ತೋಲೆಗೆ ಎಲ್ಲ ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ಬಗ್ಗೆ ಪೋಷಕರೊಬ್ಬರು, ‘ಒಬ್ಬರ ಆಹಾರದ ಆಯ್ಕೆಯು ಇತರರಿಗೆ ಹೇಗೆ ಅಗೌರವಕಾರಿಯಾಗಿದೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಪೋಷಕರು, ಪೌಷ್ಟಿಕಾಂಶ-ಭರಿತ ಊಟದ ಬಗ್ಗೆ ಹೇಳುವುದಾದ್ರೆ ‘ಮಕ್ಕಳಿಗೆ ಮೊಟ್ಟೆಯಂತಹ ಪ್ರೋಟೀನ್ ಭರಿತ ಆಹಾರವನ್ನು ಸೇವಿಸದಿದ್ದರೆ, ಅವರು ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಹೇಗೆ ಪಡೆಯುತ್ತಾರೆ?’ ಎಂದು ಕೇಳಿದ್ದಾರೆ. ಇನ್ನು ಊಟದ ಬಾಕ್ಸ್‌ನಲ್ಲಿ ಹೆಚ್ಚು ಹೊತ್ತು ಇಟ್ಟರೆ ಸಸ್ಯಾಹಾರಿ ಅಥವಾ ಮಾಂಸಾಹಾರಿ ಆಹಾರ ಎರಡು ಕೂಡ ಹಾಳಾಗುತ್ತದೆ. ಒಟ್ಟಿನಲ್ಲಿ ಆಹಾರ ನೀಡುವುದು ಪೋಷಕರ ನಿರ್ಧಾರವಾಗಬೇಕೇ ಹೊರತು ಶಾಲೆಯದ್ದಲ್ಲ ಎಂದು ಮತ್ತೊಬ್ಬ ಪೋಷಕರು ಖಡಕ್ ಆಗಿ ಹೇಳಿದ್ದಾರೆ. ಕೊನೆಗೆ ವಿವಾದದ ಕುರಿತು ಪ್ರತಿಕ್ರಿಯಿಸಿದ ಡಿಪಿಎಸ್ ಪ್ರಾಂಶುಪಾಲೆ ಸುಪ್ರಿತಿ ಚೌಹಾಣ್, ‘ಈ ಸುತ್ತೋಲೆ ಕೇವಲ ವಿನಂತಿಯಾಗಿದೆ ಮತ್ತು ಆದೇಶವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.