Home News Agricultural Land: ನಿಮ್ಮ ಕೃಷಿ ಭೂಮಿಯ ಈ ಸಮಸ್ಯೆಗೆ ಸರ್ಕಾರದಿಂದ ಬಂದಿದೆ ಹೊಸ ರೂಲ್ಸ್!

Agricultural Land: ನಿಮ್ಮ ಕೃಷಿ ಭೂಮಿಯ ಈ ಸಮಸ್ಯೆಗೆ ಸರ್ಕಾರದಿಂದ ಬಂದಿದೆ ಹೊಸ ರೂಲ್ಸ್!

Agricultural Land

Hindu neighbor gifts plot of land

Hindu neighbour gifts land to Muslim journalist

Agricultural Land: ರೈತರು (farmers) ತಮ್ಮ ಜಮೀನಿಗೆ (Agriculture land) ಹೋಗಲು ಕಾಲುದಾರಿ ಹೊಂದಿರುವುದು ಅಗತ್ಯವಾಗಿದೆ. ಅಂತಹ ಸಂದರ್ಭದಲ್ಲಿ ಈ ಕಾಲುದಾರಿ ಪಡೆದುಕೊಳ್ಳುವುದಕ್ಕಾಗಿ ರೈತರು ಹಾಗೂ ಖಾಸಗಿ ಜಮೀನಿನ (Private Property) ಮಾಲೀಕರ ನಡುವೆ ಸಾಕಷ್ಟು ತಕರಾರು ನಡೆಯುತ್ತವೆ. ಆದರೆ ಇನ್ನುಮುಂದೆ ಸರ್ಕಾರದಿಂದ ಕೃಷಿ ಜಮೀನಿಗೆ ಕಾಲುದಾರಿ ವ್ಯವಸ್ಥೆ ಮಾಡಿಕೊಡಲಾಗುತ್ತೆ.

ಹೌದು, ರೈತರಿಗೆ ಅನುಕೂಲವಾಗುವಂತಹ ಸುತ್ತೋಲೆ ಒಂದನ್ನು ರಾಜ್ಯ ಸರ್ಕಾರ ಹೊರಡಿಸಿದ್ದು ಇನ್ನು ಮುಂದೆ ಯಾವುದೇ ಜಮೀನಿಗೆ ಹೋಗಲು ದಾರಿ ಇಲ್ಲದೆ ಇರುವ ಸಂದರ್ಭದಲ್ಲಿ ದಾರಿ ಮಾಡಿ ಕೊಡಲು ಸರ್ಕಾರವು ಕಟ್ಟು ನಿಟ್ಟಿನ ಆದೇಶವನ್ನು ಹೊರಡಿಸಿದೆ.

ರೈತರು ಎಷ್ಟೋ ಬಾರಿ ತಮ್ಮ ಜಮೀನಿಗೆ ಬೇರೆ ಜಮೀನಿನ ಮೂಲಕ ಹಾದು ಹೋಗಬೇಕು, ಇಂತಹ ಸಂದರ್ಭದಲ್ಲಿ ಕೃಷಿಗೆ ಅಗತ್ಯ ಇರುವ ಸಲಕರಣೆಗಳನ್ನು ಕೊಂಡೊಯ್ಯುವುದು ಬಹಳ ಕಷ್ಟ,  ಈ ಎಲ್ಲ ಸಮಸ್ಯೆಗಳನ್ನೂ ಅರಿತು ಸರ್ಕಾರ ಈ ಕೆಳಗಿನ ಕ್ರಮಕ್ಕೆ ಮುಂದಾಗಿದೆ.

ಇದುವರೆಗೆ ಕಾಲುದಾರಿ ಅಥವಾ ಜಮೀನಿಗೆ ಹೋಗಲು ಬೇಕಾಗಿರುವ ಸಣ್ಣ ದಾರಿಯ ವಿಚಾರವಾಗಿಯೂ ಹಲವು ರೈತರ ನಡುವೆ ಮನಸ್ತಾಪ, ಜಗಳಗಳು ಕೂಡ ನಡೆದಿವೆ. ಈ ಪರಿಣಾಮ ರೈತರು ತಮ್ಮ ಜಮೀನಿನಲ್ಲಿ ಬೆಳೆದು ಸರಿಯಾಗಿ ಸಾಗಿಸಲು ಆಗದೆ ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂಬುದನ್ನು ಸರ್ಕಾರ ಮನಗೊಂಡಿದೆ.

ಇನ್ನು ಗ್ರಾಮ ನಕ್ಷೆಯಲ್ಲಿ ತೋರಿಸಲಾಗಿರುವ ಕಾಲುದಾರಿ ಬಂಡಿ ದಾರಿ ಅಥವಾ ಸಣ್ಣ ದಾರಿಗಳನ್ನು, ಅನ್ಯ ಕೃಷಿ ಬಳಕೆದಾರರು ಕೃಷಿಕರಿಗೆ ತಿರುಗಾಡಲು ಅವಕಾಶ ನೀಡದೆ ಅಂತಹ ದಾರಿಗಳನ್ನು ಮುಚ್ಚಿದ್ದರೆ, ದಾರಿಯನ್ನು ತೆರವುಗೊಳಿಸಿ ಅನಾದಿಕಾಲದಿಂದ ಇರುವ ದಾರಿಯನ್ನೇ ಇಲ್ಲವಾಗಿಸಿದ್ದರೆ, ತಕ್ಷಣ ತಹಶೀಲ್ದಾರರು ಈ ಬಗ್ಗೆ ಮುಂಜಾಗ್ರತೆ ವಹಿಸಿ ರೈತರಿಗೆ ದಾರಿ ಮಾಡಿಕೊಡಬೇಕು ಎಂದು ಸರ್ಕಾರ ತಿಳಿಸಿದೆ.

ಅಲ್ಲದೇ ರೈತರು ತಮ್ಮ ಜಮೀನಿಗೆ ತೆರಳಲು ಅಗತ್ಯ ಇರುವ ಕಾಲು ದಾರಿ ಅಥವಾ ಬಂಡಿದಾರಿಯನ್ನು ಮುಚ್ಚಿ ರೈತರಿಗೆ ತಮ್ಮ ಕೃಷಿ ಜಮೀನಿಗೆ ಹೋಗಲು ಅಡ್ಡ ಪಡಿಸುವ ಖಾಸಗಿ ಜಮೀನುದಾರರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಗ್ರಾಮ ನಕಾಶೆಯಲ್ಲಿ ಇರುವಂತೆ ಖಾಸಗಿ ಜಮೀನಾಗಿದ್ದರು ಕೂಡ ರೈತರಿಗೆ ತಮ್ಮ ಜಮೀನಿಗೆ ತೆರಳಲು ರಸ್ತೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರ ತನ್ನ ಸುತ್ತೋಲೆಯಲ್ಲಿ ಹೊರಡಿಸಿದೆ. ಇಷ್ಟಾಗಿಯೂ ಒಂದು ವೇಳೆ ಯಾರಾದ್ರೂ ರಸ್ತೆ ಮಾಡಿಕೊಡಲು ನಿರಾಕರಿಸಿದರೆ ಅಂತವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.

ಹಾಗಾಗಿ ಇನ್ನು ಮುಂದೆ ಯಾವುದೇ ರೈತರು ಕೂಡ ತಮ್ಮ ಜಮೀನಿಗೆ ಹೋಗಲು ದಾರಿ ಇಲ್ಲ ಎಂದು ಚಿಂತೆ ಮಾಡಬೇಕಿಲ್ಲ. ಜೊತೆಗೆ ತಮ್ಮ ಜಮೀನಿಗೆ ಅಗತ್ಯ ಇರುವ ಸಲಕರಣೆಗಳನ್ನು ಕೊಂಡು ಹೋಗಲು ಹಾಗೂ ಜಮೀನಿನಿಂದ ಫಸಲನ್ನು ಸಾಗಿಸಲು ಈ ರಸ್ತೆಗಳು ಅನುಕೂಲ ಮಾಡಿಕೊಡಲಿವೆ.