Home News Education News: 1-10ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನು ಹೊಸ ಪರೀಕ್ಷೆ, ಹೊಸ ಮೌಲ್ಯಮಾಪನ ಪದ್ಧತಿ ಪ್ರಾರಂಭ!

Education News: 1-10ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನು ಹೊಸ ಪರೀಕ್ಷೆ, ಹೊಸ ಮೌಲ್ಯಮಾಪನ ಪದ್ಧತಿ ಪ್ರಾರಂಭ!

Students Study Tour

Hindu neighbor gifts plot of land

Hindu neighbour gifts land to Muslim journalist

Education News: ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅಳೆಯುವ ಮೂಲಕ ಫಲಿತಾಂಶ ಸುಧಾರಣೆಗೆ ಪ್ರತಿ ಅಧ್ಯಾಯ ಮುಗಿದ ನಂತರ ಪರೀಕ್ಷೆ ನಡೆಸಲು ಹೊಸ ಮೌಲ್ಯಮಾಪನ ಪದ್ಧತಿ ಪ್ರಾರಂಭಿಸುವ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ರಮ ಕೈಗೊಂಡಿದೆ. ಇದು ರಾಜ್ಯದ 1-10 ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಎನ್ನಲಾಗಿದೆ.

ಇದರ ಪ್ರಕಾರ, ಪ್ರತಿ ಪಾಠ ಮುಗಿದ ನಂತರ ವಿದ್ಯಾರ್ಥಿಗಳಿಗೆ ಸಣ್ಣ ಪರೀಕ್ಷೆ, ರಸಪ್ರಶ್ನೆ ನೀಡುವುದು, ಇವುಗಳನ್ನು ಡಿಜಿಟಲ್‌ ತಂತ್ರಜ್ಞಾನ ಬಳಸಿ ಸುಲಭವಾಗಿ ಮೌಲ್ಯಮಾಪನ ಮಾಡಲು ಅನುಕೂಲವಾಗುವಂತೆ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಂದ ಕೂಡಿದ ಪರೀಕ್ಷೆಗಳನ್ನು ಓಎಂಆರ್‌ಶೀಟ್‌ ಅಥವಾ ತತ್ಸಮಾನ ಶೀಟ್‌ನಲ್ಲಿ ನಡೆಸಲಾಗುವುದು.

1-10 ನೇ ತರಗತಿವರೆಗಿನ ಎಲ್ಲಾ ತರಗತಿಗಳಿಗೆ ಈ ಹೊಸ ವ್ಯವಸ್ಥೆ ಅನ್ವಯವಾಗಲಿದೆ. ಉತ್ತರ ಪ್ರತ್ರಿಕೆಗಳನ್ನು ಸ್ಕ್ಯಾನ್‌ ಮಾಡಿ ಪರೀಕ್ಷೆ ಫಲಿತಾಂಶವನ್ನು ತಕ್ಷಣ ನೀಡುವ ಅಪ್ಲಿಕೇಶನ್‌ ಅಭಿವೃದ್ಧಿ ಪಡಿಸಲಾಗುತ್ತದೆ.