Home News Girl Friend: ಗಂಡನನ್ನು ಸಂತೋಷ ಪಡಿಸಲು ಹೆಂಡತಿ ಮಾಡಿದ್ಲು ಮಾಸ್ಟರ್ ಪ್ಲಾನ್: ಹೆಂಡತಿಯ ಪ್ಲಾನ್ ನಿಂದ...

Girl Friend: ಗಂಡನನ್ನು ಸಂತೋಷ ಪಡಿಸಲು ಹೆಂಡತಿ ಮಾಡಿದ್ಲು ಮಾಸ್ಟರ್ ಪ್ಲಾನ್: ಹೆಂಡತಿಯ ಪ್ಲಾನ್ ನಿಂದ ಗಂಡ ಫುಲ್ ಹ್ಯಾಪಿ

Girl Friend

Hindu neighbor gifts plot of land

Hindu neighbour gifts land to Muslim journalist

Girl Friend: ಪ್ರೀತಿ ಎಂಬ ನವಿರಾದ ಭಾವಕ್ಕೆ ನಂಬಿಕೆ (Trust )ಅತ್ಯವಶ್ಯಕ. ನೈಜ ಪ್ರೀತಿ( Love)ಬಣ್ಣ ಧರ್ಮದ ಎಲ್ಲೆಯ ಗಡಿ ದಾಟಿ ಸ್ವಚ್ಚಂದ ಹಕ್ಕಿಯಂತೆ ಪ್ರೇಮಿಸಿ ಮದುವೆ ಎಂಬ ಬಂಧಕ್ಕೆ ಮುನ್ನುಡಿ ಬರೆಯುವುದು ಸಹಜ. ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು.

ಥೈಲ್ಯಾಂಡ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಸಂತೋಷವಾಗಿರಿಸಲು ಪ್ರೇಯಸಿಯನ್ನು ನೇಮಕ ಮಾಡಿಕೊಂಡಿರುವ ಅಪರೂಪದ ಘಟನೆ ವರದಿಯಾಗಿದೆ. ಪತ್ತೀಮಾ ಹಾಗೂ ಪಟ್ಟಾಗೋರ್ನ್ ಕರಾವಳಿ ಪ್ರಾಂತ್ಯದ ಸಮುತ್ ಪ್ರಕಾನ್‌ನಲ್ಲಿ ಕುಟುಂಬದ ವ್ಯಾಪಾರವೊಂದನ್ನು ನಡೆಸುತ್ತಿದ್ದಾರೆ.ಪತ್ತೀಮಾ ಚಮ್ನಾನ್ ಎಂಬಾಕೆ ತನ್ನ ಪತಿಯೊಂದಿಗೆ ಕೆಲ ಸಮಯಗಳ ಕಳಬಮಲಗಿರಲಿಲ್ಲವಂತೆ. ಹೀಗಾಗಿ, ತಾನು ಕೆಟ್ಟ ಹೆಂಡತಿ ಎಂದು ಅಂದುಕೊಂಡ ಮಹಿಳೆ ಗಂಡನಿಗೆ ಖುಶಿ ಪಡಿಸಲು ಬೇರೆ ಹುಡುಗಿಯನ್ನು ನೇಮಿಸಲು ತೀರ್ಮಾನ ಮಾಡಿದ್ದಾಳೆ. ಕಳೆದ ಜುಲೈನಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಪ್ರೇಯಸಿ ಬೇಕೆಂದು ಜಾಹೀರಾತು ನೀಡಿದ್ದಾಳೆ. ತನಗೆ ಕಾಲೇಜು ಡಿಪ್ಲೊಮಾ ಹೊಂದಿರುವ ಯುವತಿಯರು, ಒಂಟಿ ಮಹಿಳೆಯರು ಬೇಕಾಗಿದ್ದು, ಅವರಿಗೆ 15,000 ಬಹ್ತ್ (ರೂ. 34,000) ವೇತನವನ್ನು ನೀಡುವುದಾಗಿ ಹೇಳಿಕೊಂಡಿದ್ದಾಳೆ.

ಮಿರರ್‌ ಪತ್ರಿಕೆ ಅನುಸಾರ, ಅಭ್ಯರ್ಥಿಯು ಆಕರ್ಷಕವಾಗಿದ್ದು, ಚೆನ್ನಾಗಿ ಮಾತನಾಡಬೇಕು. ಇದರ ಜೊತೆಗೆ, ಮುಖ್ಯವಾಗಿ ಮಗುವನ್ನು ಹೊಂದಿರಬಾರದು ಎಂಬ ಕಂಡಿಷನ್‌ ಹಾಕಿದ್ದಳು. ಪತ್ತೀಮಾ, “ನನ್ನ ಪತಿ ಒಬ್ಬಂಟಿಯಾಗಿ ಹಗಲಿರುಳು ದುಡಿಯುತ್ತಿದ್ದು,ಪತಿ ಸಂತೋಷವಾಗಿರಲು ನಾನು ಬಯಸುತ್ತಿದ್ದು, ಹೀಗಾಗಿ, ಮನೆಯಲ್ಲಿರಲು ಪ್ರೇಯಸಿಯನ್ನು ಹೊಂದಲು ಇಚ್ಚಿಸುವುದಾಗಿ ಹೇಳಿದ್ದಾಳೆ.

ತನ್ನ ಗಂಡ ದೀರ್ಘಕಾಲದ ಖಿನ್ನತೆಯೊಂದಿಗೆ ಹೋರಾಡುತ್ತಿದ್ದು, ತನ್ನ ಪತಿಯನ್ನು ಚೆನ್ನಾಗಿ ನೋಡಿಕೊಳ್ಳಲು ನನ್ನಿಂದ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರೇಯಸಿಯು ನನ್ನ ಪತಿಯನ್ನು ದೈಹಿಕವಾಗಿ ಸಂತೋಷಪಡಿಸುವುದು ಅತೀ ಮುಖ್ಯ. ಪ್ರೇಯಸಿ ದೈಹಿಕ ಸುಖ ನೀಡಲು ಸಮರ್ಥರಾಗಿರಬೇಕು. ಇದಕ್ಕಾಗಿ ಅವರು ಉತ್ತಮ ವ್ಯಕ್ತಿತ್ವವನ್ನು ಹೊಂದಿರಬೇಕು ಮತ್ತು ವಿನೋದಮಯವಾಗಿರಬೇಕು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಹೆಂಡತಿ ತನಗಾಗಿ ಈ ರೀತಿ ಜಾಹಿರಾತು ಹಾಕಿರುವುದನ್ನು ಕೇಳಿ ಪತಿ ಪಟ್ಟಗಾರ್ನ್ ಅಚ್ಚರಿಗೆ ಒಳಗಾಗಿದ್ದು, ಆದರೆ ಹೆಂಡತಿಯ ಯೋಚನೆಯನ್ನು ಪತಿ ಒಪ್ಪಿಕೊಂಡಿದ್ದಾನೆ. ನೇಮಕಗೊಂಡ ವ್ಯಕ್ತಿಯನ್ನು ಕುಟುಂಬದವರ ಹಾಗೇ ಪರಿಗಣಿಸುವ ಭರವಸೆಯನ್ನು ಪತಿ ನೀಡಿದ್ದಾನೆ. ಪತ್ತೀಮಾ 33 ವರ್ಷದ ಸುಂದರ ಮಹಿಳೆಯನ್ನು ತನ್ನ ಗಂಡನ ಪ್ರೇಯಸಿಯಾಗಿ ನೇಮಿಸಿಕೊಂಡಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

 

ಇದನ್ನು ಓದಿ: Orange Vande Bharat Train : ‘ವಂದೇ ಭಾರತ್’ ರೈಲುಗಳು ಕಿತ್ತಳೆ ಬಣ್ಣದಲ್ಲಿರೋದು ಯಾಕೆ ?! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ