Home News Mysore: ಪತ್ನಿ, ಪುತ್ರನಿಗೆ ಗುಂಡಿಕ್ಕಿ ಮೈಸೂರು ಮೂಲದ ಉದ್ಯಮಿ ಆತ್ಮಹತ್ಯೆ!

Mysore: ಪತ್ನಿ, ಪುತ್ರನಿಗೆ ಗುಂಡಿಕ್ಕಿ ಮೈಸೂರು ಮೂಲದ ಉದ್ಯಮಿ ಆತ್ಮಹತ್ಯೆ!

Hindu neighbor gifts plot of land

Hindu neighbour gifts land to Muslim journalist

Mysore: ಮೈಸೂರು ಮೂಲದ ಉದ್ಯಮಿ ಹರ್ಷ ಕಿಕ್ಕೇರಿ ಅಲಿಯಾಸ್‌ ಹರ್ಷವರ್ಧನ್‌ (57) ಅವರು ತಮ್ಮ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಪತ್ನಿ ಶ್ವೇತಾ ಹಾಗೂ ಇಬ್ಬರು ಪುತ್ರರೊಂದಿಗೆ ಅಮೆರಿಕಾದ ನ್ಯೂ ಕ್ಯಾಸಲ್‌ನಲ್ಲಿ ಹರ್ಷ ಅವರು ವಾಸವಿದ್ದರು. ಹರ್ಷ ಅವರು ಪತ್ನಿ, ಹಾಗೂ ಹಿರಿಯ ಪುತ್ರನಿಗೆ ಗುಂಡಿಕ್ಕಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಅವರ ಏಳು ವರ್ಷದ ಕಿರಿಯ ಪುತ್ರ ಮನೆಯಿಂದ ಹೊರ ಹೋಗಿದ್ದರಿಂದ ಅದೃಷ್ಟವಶಾತ್‌ ಬದುಕುಳಿದಿದ್ದಾನೆ ಎಂದು ತಿಳಿದು ಬಂದಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.‌ಪೇಟೆಯ ಕಿಕ್ಕೇರಿಯವರು ಹರ್ಷ. ಇವರು ಅಮೆರಿಕಾದಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಭಾರತಕ್ಕೆ 2018 ರಲ್ಲಿ ವಾಪಾಸ್‌ ಬಂದಿದ್ದ ಇವರು ಪತ್ನಿ ಜೊತೆ ಸೇರಿ ʼಹೋಲೋ ವರ್ಲ್ಡ್‌ ರೊಬೊಟಿಕ್‌ʼ ಸಂಸ್ಥೆಯನ್ನು ಸ್ಥಾಪಿಸಿದ್ದರು. ಮೈಸೂರು ವಿಜಯನಗರ 3 ನೇ ಹಂತದ ನಿರ್ಮಿತಿ ಕೇಂದ್ರ ರಸ್ತೆಯಲ್ಲಿ ಹೋಲೋ ವರ್ಲ್ಡ್‌ ಕಂಪನಿಯ ಕಾರ್ಪೊರೇಟ್‌ ಕಚೇರಿಯಿದೆ. ಈ ಸಂಸ್ಥೆಯನ್ನು ಸ್ಥಾಪಿಸಿದ ನಂತರ ದಂಪತಿ ಅಮೆರಿಕಾಕ್ಕೆ ಮರಳಿದ್ದರು ಎಂದು ವರದಿಯಾಗಿದೆ.