Home News ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಿ, ನದಿಗಳನ್ನು ಪೂಜಿಸಿ: RSS ನಾಯಕ ಹೊಸಬಾಳೆ

ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಿ, ನದಿಗಳನ್ನು ಪೂಜಿಸಿ: RSS ನಾಯಕ ಹೊಸಬಾಳೆ

Image Credit:ANI

Hindu neighbor gifts plot of land

Hindu neighbour gifts land to Muslim journalist

ಲಕ್ನೋ: ಭಾರತ ನೆಲದಲ್ಲಿರುವ ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬೇಕು, ನದಿಗಳನ್ನು ಪೂಜಿಸಬೇಕು ಎಂದು ಹಿರಿಯ ಆರ್‌ಎಸ್‌ಎಸ್‌ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಹಿಂದೂ ಧರ್ಮ ಶ್ರೇಷ್ಠವಾದದ್ದು. ಭಾರತದಲ್ಲಿ ಮುಸ್ಲಿಮರಿಗೆ ಏನೂ ತೊಂದರೆ ಆಗಲ್ಲ. ನಮ್ಮ ಮುಸ್ಲಿಂ ಸಹೋದರರು ಸಹ ಸೂರ್ಯ ನಮಸ್ಕಾರ ಮಾಡಿದರೆ, ಅವರಿಗೆ ಏನೂ ಆಗಲ್ಲ. ಹಾಗಂತ ಅವರು ಮಸೀದಿಗೆ ಹೋಗುವುದನ್ನು ಯಾರೂ ತಡೆಯುವುದಿಲ್ಲ. ನಮ್ಮ ಹಿಂದೂ ಧರ್ಮ ಸರ್ವೋಚ್ಛ. ಅದು ಎಲ್ಲ ಜನರ ಪರವಾಗಿದೆ ಎಂದು ಹೊಸಬಾಳೆ ಹೊಸ ಪ್ರತಿಪಾದನೆ ಮಾಡಿದ್ದಾರೆ.

ಸೂರ್ಯ ನಮಸ್ಕಾರವು ಯೋಗಾಸನಗಳ ಒಂದು ಭಾಗ. ವೈಜ್ಞಾನಿಕ ಮತ್ತು ಆರೋಗ್ಯ ಆಧಾರಿತ ಅಭ್ಯಾಸ. ಇದರಿಂದ ಮುಸ್ಲಿಮರಿಗೆ ಏನು ಹಾನಿ? ಪ್ರಾರ್ಥನೆ ಮಾಡುವವರು ಪ್ರಾಣಾಯಾಮ ಮಾಡಿದರೆ ತಪ್ಪೇ? ಸೂರ್ಯ ನಮಸ್ಕಾರ ಮಾಡೋದಕ್ಕೆ ನಮಾಜ್‌ ಬಿಡಿ ಅಂತ ನಾವು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜನರು ಮಾನವ ಧರ್ಮಕ್ಕೆ ಆದ್ಯತೆ ಮೂಲಕ ಯಾವುದೇ ನಂಬಿಕೆಯನ್ನು ಅನುಸರಿಸಲು ಸ್ವತಂತ್ರರು. ಹಿಂದೂ ತತ್ವಶಾಸ್ತ್ರವು ಎಲ್ಲಾ ಜೀವಿಗಳು ಮತ್ತು ಪ್ರಕೃತಿ ವಿಚಾರವಾಗಿ ಅಹಿಂಸೆಯನ್ನು ಬೋಧಿಸುತ್ತದೆ ಎಂದು ತಿಳಿಸಿದ್ದಾರೆ.