Home News Muslim tombs: ರಾಯಚೂರಲ್ಲಿ ಮುಸ್ಲಿಂ ಗೋರಿಗಳು ಉಸಿರಾಡುತ್ತಿವೆ!

Muslim tombs: ರಾಯಚೂರಲ್ಲಿ ಮುಸ್ಲಿಂ ಗೋರಿಗಳು ಉಸಿರಾಡುತ್ತಿವೆ!

Hindu neighbor gifts plot of land

Hindu neighbour gifts land to Muslim journalist

Muslim Tombs: ನಿಮಗೆ ಗೊತ್ತಿರಬಹುದು ಸಹಜವಾಗಿ ಮುಸ್ಲಿಂ ಧರ್ಮದ ವ್ಯಕ್ತಿಗಳು ಸತ್ತರೆ ಅವರ ಹೆಣವನ್ನು ಸುಡುವ ಕ್ರಮವಿಲ್ಲ. ಆದ್ರೆ ವಿಚಿತ್ರ ಆದ್ರೂ ಸತ್ಯವಾದ ಸಂಗತಿಯೊಂದು ಇಲ್ಲಿದೆ. ಹೌದು, ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಆನಾಹೊಸೂರು ಗ್ರಾಮದಲ್ಲಿ ಮುಸ್ಲಿಂ ಧರ್ಮ ಗುರುಗಳ ಗೋರಿಗಳು (Muslim tombs)  ಉಸಿರಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ವಿಶೇಷ ಅಂದ್ರೆ ನೂರಾರು ವರ್ಷಗಳ ಧರ್ಮ ಗುರುಗಳ ಗೋರಿ ಉಸಿರಾಟ ಜನರ ಆಶ್ಚರ್ಯಕ್ಕೆ ಕಾರಣವಾಗಿದೆ.

ಆನಾಹೊಸೂರು ಗ್ರಾಮದ ಶರಣರ ಬಾವಿ ದರ್ಗಾ ಶರೀಫ್‌ನಲ್ಲಿರುವ 3  ಮಜಾರಗಳು ಇದು ಪ್ರತೀ ವರ್ಷ ಹಜರತ್ ಸೈಯದ್ ಶಾ ನಸರುದ್ದೀನ್ ನಬಿರಾ ಖಾದ್ರಿ ಉರುಸ್ ವೇಳೆಯೇ ಗೋರಿಗಳು ಉಸಿರಾಡುತ್ತವೆ. ನೂರಾರು ವರ್ಷಗಳ ಹಳೆ ಗೋರಿಗಳು ಉಸಿರಾಟ ನಡೆಸಿದಂತೆ ಅಲ್ಲಿಗೆ ಭೇಟಿ ನೀಡುತ್ತಿರುವ ಭಕ್ತರಿಗೆ ಭಾಸವಾಗುತ್ತಿದೆ. ಅದರ ವಿಡಿಯೊಗಳು ಸಾರ್ವಜನಿಕವಾಗಿ ಹರಿದಾಡುತ್ತಿದೆ.

ಅದರಲ್ಲೂ ಉರುಸ್‌ನ 40 ದಿನಗಳ ಕಾಲ ಮಾತ್ರ ಗೋರಿಗಳು ಉಸಿರಾಡುತ್ತವೆಯಂತೆ. ಈ ಉಸಿರಾಟ ಸಮಯದಲ್ಲಿ ಗೋರಿಯ ಉಸಿರಾಟದಿಂದ ಹೂಗಳು ಸ್ಪಂದಿಸುತ್ತದೆ ಎಂದು ಅಲ್ಲಿ ಆ ಘಟನೆಯನ್ನು ಪ್ರತ್ಯಕ್ಷ ನೋಡಿದ ಜನರು ಹೇಳುತ್ತಾರೆ.