Home News Love marriage: ಹಿಂದೂ ಹುಡುಗನ ಜೊತೆ ಮುಸ್ಲಿಂ ಹುಡುಗಿ ಮದುವೆ! ಪೊಲೀಸರ ಭದ್ರತೆ ಕೋರಿದ ನವ...

Love marriage: ಹಿಂದೂ ಹುಡುಗನ ಜೊತೆ ಮುಸ್ಲಿಂ ಹುಡುಗಿ ಮದುವೆ! ಪೊಲೀಸರ ಭದ್ರತೆ ಕೋರಿದ ನವ ಜೋಡಿ

Hindu neighbor gifts plot of land

Hindu neighbour gifts land to Muslim journalist

Love marriage: ಪೋಷಕರಿಂದ ತೀವ್ರ ವಿರೋಧದ ನಡುವೆಯೂ ಹಿಂದೂ ಯುವಕನನ್ನು ಮುಸ್ಲಿಂ ಯುವತಿಯೋರ್ವರು ಮದುವೆಯಾಗಿದ್ದಾಳೆ.ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಜ್ರಾ ಮತ್ತು ಹರೀಶ್ ಬಾಬು ಎಂಬುವವರು ದೇಗುಲದಲ್ಲಿ ವಿವಾಹವಾಗಿ (Love marriage) ಇಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆಗಮಿಸಿ ರಕ್ಷಣೆ ಕೋರಿ ಮನವಿ ಮಾಡಿದ್ದಾರೆ. ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇಶ್ವರ ಗ್ರಾಮದ ನಮ್ಮಾ, ಚಿಕ್ಕಬಳ್ಳಾಪುರ ತಾಲೂಕಿನ ಯಾಪಲಹಳ್ಳಿಯ ಹರೀಶ್ ಇಬ್ಬರೂ ಪರಸ್ಪರ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಹರೀಶ್ ಜೊತೆ ಮದುವೆಗೆ ನಜ್ಮಾ ಅವರ ಪೋಷಕರಿಂದ ವಿರೋಧವಿತ್ತು ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನವೊಂದರಲ್ಲಿ ಮದುವೆಯಾಗಿ, ಬಳಿಕ ಎಸ್ಪಿ ಕಚೇರಿ ಬಂದು ವಿವರಣೆ ನಿಡಿದ್ದಾರೆ. ಈ ಸಂಬಂಧದ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್‌ ಠಾಣೆಗೆ ಎಸ್ಪಿ ಪ್ರಕರಣ ವರ್ಗಾಯಿಸಿದ್ದಾರೆ. ಅಲ್ಲದೇ ಪತಿ ಹರೀಶ್ ಜೊತೆ ಹೋಗುವುದಾಗಿ ನಜ್ಮಾ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಲಿಖಿತ ಹೇಳಿಕೆಯನ್ನೂ ದಾಖಲಿಸಿದ್ದಾರೆ. ಇನ್ನು ದಂಪತಿಗೆ ಯಾವುದೇ ತೊಂದರೆ ನೀಡದಂತೆಯೂ ಪೊಲೀಸರು ನಷ್ಮಾ ಅವರ ಪೋಷಕರಿಗೆ ಠಾಣೆಗೆ ಕರೆಸಿ ಸೂಚನೆ ನೀಡಿದ್ದಾರೆ.