Home News ಪಾಲ್ತಾಡಿ : ಗುಡ್ಡೆಯಲ್ಲಿ ವ್ಯಕ್ತಿಯ ಕೊಲೆ : ಇಬ್ಬರ ವಿರುದ್ದ ಪ್ರಕರಣ ದಾಖಲು

ಪಾಲ್ತಾಡಿ : ಗುಡ್ಡೆಯಲ್ಲಿ ವ್ಯಕ್ತಿಯ ಕೊಲೆ : ಇಬ್ಬರ ವಿರುದ್ದ ಪ್ರಕರಣ ದಾಖಲು

Hindu neighbor gifts plot of land

Hindu neighbour gifts land to Muslim journalist

ಸವಣೂರು : ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು,ಇದೊಂದು ಕೊಲೆಯಾಗಿರುವ ಸಾಧ್ಯತೆ ಇದೆ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪಾಲ್ತಾಡಿ ಗ್ರಾಮದ ಬೊಳಿಯಾಲ ನಿವಾಸಿ ಸೇಸಪ್ಪ ಪೂಜಾರಿ (76ವ.) ಎಂಬವರ ಮೃತದೇಹ ಪತ್ತೆಯಾಗಿದೆ.ಫೆ.5ರಿಂದ ನಾಪತ್ತೆಯಾಗಿದ್ದಾರೆಂದು ಹೇಳಲಾಗಿರುವ ಸೇಸಪ್ಪ ಪೂಜಾರಿಯವರ ಶವ ಪತ್ತೆಯಾಗಿದೆ.ಸಾವಿನಲ್ಲಿ ಸಂಶಯವಿರುವ ಹಿನ್ನೆಲೆಯಲ್ಲಿ ಸೇಸಪ್ಪ ಪೂಜಾರಿಯವರ ಪುತ್ರಿ ಶುಭವತಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸೇಸಪ್ಪ ಪೂಜಾರಿಯವರು ತನ್ನ ತಮ್ಮ ಬಾಲಕೃಷ್ಣ ಪೂಜಾರಿಯವರ ಮನೆಯಲ್ಲಿ ಮೂಳೆ ಮುರೀತಕ್ಕೋಳಗಾಗಿ ವಿಶ್ರಾಂತಿ ಚಿಕಿತ್ಸೆ ಯಲ್ಲಿದ್ದು, ಫೆ.5ರಿಂದ ನಾಪತ್ತೆಯಾಗಿದ್ದು,ಎ.8ರಂದು ಅಪರಾಹ್ನ 3:00 ಗಂಟೆಗೆ ಪಾಲ್ತಾಡಿ ಗ್ರಾಮದ ಬೋಳಿಯಾಲ ಎಂಬಲ್ಲಿ ಗೇರು ನಿಗಮಕ್ಕೆ ಸಂಬಂಧ ಪಟ್ಟ ಗುಡ್ಡ ಜಮೀನಲ್ಲಿ ಸೇಸಪ್ಪ ಪೂಜಾರಿ ಯವರ ಮೃತದೇಹವು ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಶೇಷಪ್ಪ ಪೂಜಾರಿ ಯವರು ನಡೆದಾಡಲು ಅಶಕ್ತರಾಗಿದ್ದು ಮನೆಯಿಂದ ದೂರದ ಗುಡ್ಡ ಪ್ರದೇಶಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಡುವ ಸಾಧ್ಯತೆ ಕಡಿಮೆ ಇದೆ ಎಂದು ಶುಭವತಿ ಅವರು ದೂರು ನೀಡಿದ್ದರು..

ಬಳಿಕ ನಡೆದ ಬೆಳವಣಿಗೆಯಲ್ಲಿ ಮೃತರ ಇನ್ನೋರ್ವ ಪುತ್ರಿ ಪುಷ್ಪಾವತಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿ ತನ್ನ ತಂದೆ ಸೇಸಪ್ಪ ಪೂಜಾರಿ ಅವರನ್ನು ಅವರ ಜಾಗವನ್ನು ಕಬಳಿಸುವ ಹುನ್ನಾರದಲ್ಲಿ ಅಥವಾ ಅವರನ್ನು ಆರೈಕೆ ಮಾಡುವುದನ್ನು ತಪ್ಪಿಸಲು ಕೊಲೆ ಮಾಡಿರುವ ಸಾಧ್ಯತೆ ಇರುವ ಕುರಿತು ದೂರು ನೀಡಿದ್ದರು.

ಇದರಂತೆ ಸೇಸಪ್ಪ ಪೂಜಾರಿ ಅವರ ಸಹೋದರ ಬಾಲಕೃಷ್ಣ ಪೂಜಾರಿ ಹಾಗೂ ಅವರ ಮಗ ವೇಣುಗೋಪಾಲ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.