

C M Siddaramaiah: ಮೂಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ರಿಲೀಫ್ ದೊರಕಿದೆ. ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಪ್ರಕರಣವನ್ನು ಸಿಬಿಐಗೆ ನೀಡಲು ನಿರಾಕರಣೆ ಮಾಡಿದೆ. ಇಡೀ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಮಾಡಿದ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ಈ ಆದೇಶ ನೀಡಿದೆ. ಮೂಡಾ ಕೇಸನ್ನು ಸದ್ಯ ಲೋಕಾಯುಕ್ತ ಹಾಗೂ ರಾಜ್ಯದ ಏಜೆನ್ಸಿಗಳು ತನಿಖೆ ಮಾಡುತ್ತಿದೆ. ಸಿದ್ದರಾಮಯ್ಯ ಸಿಎಂ ಆಗಿರುವ ಕಾರಣ ಅವರ ಏಜೆನ್ಸಿಗಳೇ ಪ್ರಕರಣದ ವಿಚಾರಣೆ ಮಾಡುವುದು ಸರಿಯಲ್ಲ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಲು ಆಗ್ರಹಿಸಿ ಸ್ನೇಹಮಹಿ ಕೃಷ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆಯನ್ನು ಇಂದು (ಶುಕ್ರವಾರ) ಕೋರ್ಟ್ ಮಾಡಿದ್ದು, ತೀರ್ಪು ಪ್ರಕಟ ಮಾಡಿದೆ. ಈ ಮೂಲಕ ಕಾನೂನು ಹೋರಾಟದಲ್ಲಿ ಸ್ನೇಹಮಯಿ ಕೃಷ್ಣ ಅವರಿಗೆ ದೊಡ್ಡಮಟ್ಟದ ಹಿನ್ನಡೆಯಾಗಿದೆ. ಸಿಬಿಐಗೆ ಈ ಕೇಸ್ ವರ್ಗಾವಣೆ ಆಗೋದಿಲ್ಲ. ಆದರೆ ಲೋಕಾಯುಕ್ತ ತನಿಖೆಯು ಮುಂದುವರಿಯಲಿದೆ ಎಂದು ಕೋರ್ಟ್ ಹೇಳಿದೆ.













