Home News ಮೂವರು ಮಕ್ಕಳ ಜೊತೆಗೆ ನೀರಿನ ಸಂಪ್ ಗೆ ಹಾರಿ ಆತ್ಮಹತ್ಯೆಗೆ ಶರಣಾದ ತಾಯಿ!!

ಮೂವರು ಮಕ್ಕಳ ಜೊತೆಗೆ ನೀರಿನ ಸಂಪ್ ಗೆ ಹಾರಿ ಆತ್ಮಹತ್ಯೆಗೆ ಶರಣಾದ ತಾಯಿ!!

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ಕುಟುಂಬ ಕಲಹದಿಂದ ಬೇಸತ್ತವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡುತ್ತಾರೆ. ಅವರಿಗೆ ಬದಕಲು ಸಾಕಷ್ಟು ಅವಕಾಶಗಳು ಇದ್ದರೂ ದುಡುಕು ನಿರ್ಧಾರ ಕೈಗೊಳ್ಳುತ್ತಾರೆ. ಆದರೆ ತಾವು ಒಬ್ಬರೇ ಆತ್ಮಹತ್ಯೆ ಮಾಡಿಕೊಳ್ಳದೇ ಜಗತ್ತಿನ ಬಗ್ಗೆ ಅರಿವೇ ಇಲ್ಲದ ಕಂದಮ್ಮಗಳನ್ನೂ ಸಾಯಿಸುತ್ತಿರುವುದು ಅತ್ಯಂತ ಅಮಾನವೀಯ ಘಟನೆ ಆಗಿದೆ.

ಹೌದು ಕೆಲವೊಂದು ಘಟನೆಗಳನ್ನು ಕೇಳುವಾಗ ಅಥವಾ ನೋಡುವಾಗ ಆಶ್ಚರ್ಯ ಅನ್ನಿಸಬಹುದು. ಆದರೆ ನಾವು ಒಪ್ಪಿಕೊಳ್ಳಲೇ ಬೇಕು. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಬಳಿಯ ವಿಠಲವಾಡಿ ತಾಂಡಾದಲ್ಲಿ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೂವರು ಮಕ್ಕಳನ್ನು ನೀರಿನ ಟ್ಯಾಂಕ್ ಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಗೀತಾ ಅವರು ಸೃಷ್ಟಿ, ಸಮರ್ಥ ಮತ್ತು ಕಿಶನ್ ಮೂವರು ಮಕ್ಕಳೊಂದಿಗೆ ನೀರಿನ ಟ್ಯಾಂಕ್ ನಲ್ಲಿ ಹಾರಿ‌ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮಾಹಿತಿ ದೊರೆತಿದೆ.

ಹಿಂದಿನ ರಾತ್ರಿ ಪತಿಯೊಂದಿಗೆ ಜಗಳ ಮಾಡಿದ್ದ ಗೀತಾ, ಪತಿ ರಾಮು ಮಲಗಿದ್ದ ವೇಳೆ ಮೂವರು‌ ಮಕ್ಕಳನ್ನು ನೀರಿನ‌ ಟ್ಯಾಂಕ್ ಗೆ ಎಸೆದು ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಟ್ಯಾಂಕ್ ನಲ್ಲಿ ಬಿದ್ದಿದ್ದಾಳೆ ಎಂದು ಮಾಹಿತಿ ದೊರೆತಿದೆ.

ಮರುದಿನ ಪತಿ ಹುಡುಕಾಡಿದ ನಂತರ ಮನೆಯಲ್ಲಿ ಮಕ್ಕಳು ಪತ್ನಿ ಇಲ್ಲದಿರುವುದು ಕಂಡು ರಾತ್ರಿ ವೇಳೆ ಮನೆಯಿಂದ ಹೊರಬಂದು ನೋಡಿದಾಗ ಪತ್ನಿ ಮಕ್ಕಳು ಕಾಣಿಸಲಿಲ್ಲ.

ನಂತರ ಮನೆ ಬಾಗಿಲ ಬಳಿಯಿರುವ ನೀರಿನ ಟ್ಯಾಂಕ್ ಬಾಗಿಲು ತೆರೆದುಕೊಂಡಿದ್ದುದನ್ನು ಗಮನಿಸಿದ್ದು ಅದರೊಳಗೆ ಲೈಟ್‌ ಹಾಕಿ ನೋಡಿದಾಗ ಮಕ್ಕಳು ಮತ್ತು ಪತ್ನಿಯರ ಮೃತದೇಹಗಳು ಪತ್ತೆಯಾಗಿವೆ ಎಂದು ಪತಿ ರಾಮು ತಿಳಿಸಿದ್ದಾರೆ.

ಸದ್ಯ ಈ ದುರ್ಘಟನೆ ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ತಿಕೋಟಾ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿದು ಬರಬೇಕಿದೆ.

ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಕನಿಷ್ಠ ಶಿಕ್ಷಣ ಕೊಡಿಸುವ ಪ್ರಯತ್ನ ನಡೆಯುತ್ತಿದೆ. ಹಾಗಿರುವಾಗ ಸದ್ಯ ಇಂತಹ ಮನಕಲಕುವ ಘಟನೆಗಳಿಗೆ ಕಡಿವಾಣ ಹಾಕಲೇಬೇಕು. ಸರ್ಕಾರ ಇಂತಹ ಘಟನೆಗಳು ನಡೆಯದಂತೆ ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ. ಅಮಾಯಕ ಜೀವದ ರಕ್ಷಣೆ ಮಾಡಬೇಕಾಗಿದೆ.