Home News Kottayam: ರೈಲು ಹಳಿಯಲ್ಲಿ ತಬ್ಬಿಕೊಂಡು ನಿಂತ ಅಮ್ಮ-ಮಕ್ಕಳು; ನುಚ್ಚುನೂರಾದ ದೇಹ

Kottayam: ರೈಲು ಹಳಿಯಲ್ಲಿ ತಬ್ಬಿಕೊಂಡು ನಿಂತ ಅಮ್ಮ-ಮಕ್ಕಳು; ನುಚ್ಚುನೂರಾದ ದೇಹ

Hindu neighbor gifts plot of land

Hindu neighbour gifts land to Muslim journalist

Kottayam: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಟ್ಟಾಯಂ ನಲ್ಲಿ ನಡೆದಿದೆ.

ಶೈನಿ ಕುರಿಯಾಕೋಸ್‌ (43) ಅವರ ಹೆಣ್ಣು ಮಕ್ಕಳಾದ ಅಲೀನಾ (11), ಇವಾನಾ (10) ಸಾವಿಗೀಡಾಗಿದ್ದಾರೆ. ಪರೋಲಿಕಲ್‌ ರೈಲ್ವೇ ಗೇಟ್‌ ಬಳಿ ನಿನ್ನೆ ಬೆಳಗ್ಗೆ 5.30 ರ ಸುಮಾರಿಗೆ ಈ ಅವಘಡ ಸಂಭವಿಸಿದೆ.

ತೋಡುಪುಳ ಚುಂಗಮ್‌ ಮೂಲದ ಪತಿ ನೋಬಿ ಈತ ಇರಾಕ್‌ನಲ್ಲಿ ತೈಲ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ 9 ತಿಂಗಳಿನಿಂದ ಶೈನಿ ತನ್ನ ಸ್ವಂತ ಮನೆಯಲ್ಲಿ ವಾಸ ಮಾಡುತ್ತಿದ್ದು, ಚರ್ಚ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದು. ಮೂವರೂ ಹಳಿಗೆ ಬಂದು ಒಬ್ಬರನ್ನೊಬ್ಬರು ಅಪ್ಪಿ ನಿಂತಿದ್ದು, ನೀಲಂಬೂರ್‌ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್‌ ಎಷ್ಟೇ ಹಾರ್ನ್‌ ಹಾಕಿದರೂ ಕದಲದೇ ನಿಂತೇ ಇದ್ದರು.

ಅಷ್ಟರಲ್ಲಿ ರೈಲು ಮೂವರ ಮೇಲೆ ಹಾದು ಹೋಗಿದೆ. ಅವರ ಗುರುತು ಪತ್ತೆ ಹಚ್ಚಲು ಆಗಿಲ್ಲ. ನಂತರ ಬಟ್ಟೆಗಳ ಮೇಲೆ ಇದ್ದ ಗುರುತುಗಳಿಂದ ಪತ್ತೆ ಮಾಡಲಾಯಿತು. ಪತಿ ರಜೆಯ ಸಂದರ್ಭ ಮನೆಗೆ ಬರುತ್ತಿದ್ದಾಗ, ಕುಡಿದು ಪತ್ನಿ ಶೈನಿಯ ಮೇಲೆ ಹಲ್ಲೆ ಮಾಡುತ್ತಿದ್ದ ಎನ್ನುವ ಕುರಿತು ವರದಿಯಾಗಿದೆ.

ಗಂಡನ ಕಿರುಕುಳ ಸಹಿಸಲಾಗದೆ ಆಕೆ ತನ್ನ ಹೆತ್ತ ಮನೆಗೆ ಬಂದಿದ್ದು, ಕುಟುಂಬ ನ್ಯಾಯಾಲಯದಲ್ಲಿ ಕೌಟುಂಬಿಕ ಹಿಂಸಾಚಾರದ ದೂರನ್ನು, ವಿಚ್ಚೇದನ ಅರ್ಜಿಯನ್ನು ಸಲ್ಲಿಸಲಾಗಿತ್ತು. ಶೈನಿ ಮದುವೆಯ ನಂತರ ಕೆಲಸಕ್ಕೆ ಹೋಗಲು ನೋಬಿ ಅನುಮತಿ ನೀಡಿರಲಿಲ್ಲ. ಬಿಎಸ್ಸಿ ನರ್ಸಿಂಗ್‌ ಪದವೀಧರೆಯಾದ ಶೈನಿ ಜೀವನ ವೆಚ್ಚ, ಮತ್ತು ಮಕ್ಕಳ ಶಿಕ್ಷಣವನ್ನು ಆಕೆಯ ಸಹೋದರರು, ಪೋಷಕರು ನೋಡಿಕೊಳ್ಳುತ್ತಿದ್ದರು.

ಮಗ ಎಡ್ವಿನ್‌ 9ನೇ ತರಗತಿ ವಿದ್ಯಾರ್ಥಿ, ಅಲೀನಾ ಮತ್ತು ಇವಾನಾ ಆರು ಮತ್ತು ಐದನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ.